ಗರುಡ ಪಾತಾಳ

ಮೊನ್ನೆ ಊರಿಗೆ ಹೋದ ದಿವಸವೇ ವರುಣನ ಆಗಮನವಾಗಿತ್ತು. ಅದೇ ಸಮಯಕ್ಕೆ ತನ್ನೊಡಲಿನ ಸುಮಗಳನ್ನರಳಿಸುತ್ತಾ ನಸು ನಗುತ್ತಾ ನನ್ನ ಕ್ಯಾಮೆರಾ ಕಣ್ಣಿಗೆ ಬಿದ್ದವಳಿವಳು. ಇದೇನು ಮಹಾ ಅಂತ ಹುಬ್ಬೆರಿಸದಿರಿ. ಅಂತಿಂಥವಳಲ್ಲ. ಹೆಸರು “ಗರುಡ ಪಾತಾಳ”. ಇದರೊಂದಿಗೆ “ಈಶ್ವರ ಬೇರು” ಎಂಬ ಗಿಡದ ಬೇರು ಬಳಸಿ ಚೂರ್ಣ ತಯಾರಿಸಿ ವಿಷ ಜಂತು ಕಚ್ಚಿದಾಗ ವಿಷ ಹೊರತೆಗೆಯಲು ಬಳಸುತ್ತಿದ್ದರು. ಈಗಲೂ ಮಲೆನಾಡಿನ ಕೆಲವು ಕಡೆ ಇದರ ಬಳಕೆ ಇದೆ. ಅಂತಹ ಅಪರೂಪದ ಗಿಡದ ಬಗ್ಗೆ ಇಂದಿನವರಿಗೆ ಎಷ್ಟು ಗೊತ್ತು?

ಹವಿಸ್ಸು

ವೀರ ಸಾವರ್ಕರ್ ಅಂದಾಕ್ಷಣ ದೇಹವಿಡೀ ಒಮ್ಮೆ ಮಿಂಚಿನ ಸಂಚಾರವಾಗುತ್ತದೆ. ಹೃದಯ ತುಂಬಿ ಭಾವ ಲಹರಿ ಮೀಟ ತೊಡಗುತ್ತದೆ. ಹಿಮಾಲಯದಂತೆ ಹಬ್ಬಿ ನಿಂತ ಎತ್ತರದ ವ್ಯಕ್ತಿತ್ವ. ನಿರಂತರ ಅಂತರ್ಗಂಗೆಯಂತೆ ದಶದಿಕ್ಕುಗಳಿಗೂ ಹರಿದ ಪ್ರತಿಭೆ ಕರ್ತೃತ್ವ. ಅಪಾರ ವಿದ್ವತ್ತಿನ ಅನುಪಮ ಸತ್ವ. ವಿದ್ವತ್ತಿನ ನಿರ್ಘಾತದಂತೆ ಅಡಿಗಡಿಗೂ ಸಿಡಿಯುವ ಪ್ರಖರ ಸ್ವತ್ವ!

ಆಜ್ಯ…ಹವಿಸ್ಸು…ಆತ್ಮಾಹುತಿ!!!

ಆಜ್ಯ…ಹವಿಸ್ಸು…ಆತ್ಮಾಹುತಿ!!!
 
 

 

 
            ಎಳವೆಯಲ್ಲಿ ಪಠ್ಯ ಪುಸ್ತಕಗಳಲ್ಲಿ ಇರುತ್ತಿದ್ದ ಕಥೆ, ಹಳೆಗನ್ನಡದ ಕಾವ್ಯ, ಇತಿಹಾಸದ ಯಾವುದೇ ಘಟನೆ ಇರಲಿ ಅದನ್ನು ಮೊದಲೇ ಓದದಿದ್ದರೆ ಸಮಧಾನ ಇರುತ್ತಿರಲಿಲ್ಲ. ಮೂರನೆಯ ತರಗತಿಯಲ್ಲಿ ಓದುತ್ತಿದ್ದ ಸಮಯ. ಸ್ವಾತಂತ್ರ್ಯ ಹೋರಾಟದ ಘಟನೆಗಳನ್ನು ಓದುತ್ತಾ ಹೋಗುತ್ತಿದ್ದಂತೆ ಅಚಾನಕ್ಕಾಗಿ ಕೆಲವು ಹೆಸರುಗಳ ಉಲ್ಲೇಖ ಕಂಡು ಬಂತು. “ವಿ. ದಾ. ಸಾವರ್ಕರ್, ಆಜಾದ್, ಭಗತ್ ಸಿಂಗ್ ಕ್ರಾಂತಿಕಾರಿಗಳಾಗಿದ್ದರು. ಸಶಸ್ತ್ರ ಹೋರಾಟದಲ್ಲಿ ನಂಬಿಕೆ ಇರಿಸಿದ್ದ ಅವರು ಯುವಕರನ್ನು ಕ್ರಾಂತಿ ಸಂಘಟನೆಗೆ ಸೆಳೆದು ಕೊಳ್ಳುತ್ತಿದ್ದರು. ಆದರೆ ಕ್ರಾಂತಿಕಾರಿಗಳ ಹೋರಾಟ ಯಶಸ್ಸು ಕಾಣದೇ ಸಂಘಟನೆ ಮುರುಟಿ ಹೋಯಿತು.”
ಇಷ್ಟೇ!
                 ಆಗಲೇ ನನ್ನ ಮನದೊಳಗೇ ಒಂದು ಅನುಮಾನದ ಹುತ್ತ ಮೊಳಕೆಯೊಡೆದಿತ್ತು. ಕ್ರಾಂತಿಕಾರಿಗಳೆಂದೆನಿಸಿಕೊಂಡವರು ಸಂಘಟನೆ ಮಾಡಿ ಹೋರಾಟ ನಡೆಸಿದ್ದು ಇತಿಹಾಸದ ಪುಟದಲ್ಲಿ ಒಂದೆರಡು ವಾಕ್ಯಗಳಿಗೆ ಸೀಮಿತಗೊಳ್ಳಲು ಕಾರಣವೇನು? ಅವರಿಗೆ ಯಶ ಸಿಗಲಿಲ್ಲ ಹಾಗೂ ಸಂಘಟನೆ ಮುರುಟಿ ಹೋಯಿತು ಎಂಬುದು ಎಷ್ಟು ಸತ್ಯ? ಕೇವಲ ಒಂದು ದಿವಸ ಉಪವಾಸ ಕೂತು ಆರಾಮವಾಗಿ ಜೈಲಿನಲ್ಲಿ ಶಿಕ್ಷೆ(?!) ಅನುಭವಿಸಿದ್ದನ್ನು ಪುಟಗಟ್ಟಲೇ ವರ್ಣಿಸಿದುದರ ಹಿಂದಿನ ಮರ್ಮವೇನು?
                ಅದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಸೆಳೆದದ್ದು ಆ ಮೊದಲ ಹೆಸರು…ವಿ. ದಾ. ಸಾವರ್ಕರ್…ಯಾರವರು? ಅವರ ಪೂರ್ಣ ನಾಮಧೇಯವೇನು? ಅವರ ತತ್ವಗಳೇನು? ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾತ್ರವಲ್ಲ ಇತಿಹಾಸಕ್ಕೆ ಅವರ ಕೊಡುಗೆ ಏನು?
ಉತ್ತರ ಸಿಗುವುದು ಅಷ್ಟು ಸುಲಭವಿರಲಿಲ್ಲ. ಯಾಕೆಂದರೆ ನನ್ನ ಸುತ್ತಮುತ್ತಲಿನವರಿಗೆ ಅದರ ಅರಿವಿರಲಿಲ್ಲ. ಪಠ್ಯದಲ್ಲೇ ಅವರ ಹೆಸರುಗಳನ್ನು ಉಲ್ಲೇಖಿಸಲು ಹಿಂದೆ ಮುಂದೆ ನೋಡುವ ಆಳುವ ಜನ ಪ್ರತಿನಿಧಿ(!)ಗಳು ಅವರ ಚರಿತ್ರೆಯನ್ನು ಪ್ರಕಟಿಸಲು ಅನುಕೂಲ ಮಾಡಿ ಕೊಟ್ಟಾರೇ?
                   ಆಗ ಸಿಕ್ಕಿದ್ದೇ ಆತ್ಮಾಹುತಿ! ಪೊಳ್ಳು ಇತಿಹಾಸದ ಸುಳಿಯಿಂದ ತಪ್ಪಿಸಿಕೊಂಡು ಬರಲು ಒದ್ದಾಡುತ್ತಿದ್ದ ನನಗೆ ದೊರಕಿದ ಆಸರೆ ಅದು! ಹೌದು
ಯಾವ ಹೆಸರು ನನ್ನನ್ನು ನೈಜ ಇತಿಹಾಸದ ಅಧ್ಯಯನಕ್ಕೆ ತೆರೆದುಕೊಳ್ಳುವಂತೆ ಕರೆದು ಹೇಳಿತ್ತೋ ಅದೇ ಹೆಸರು ಪುಸ್ತಕ ಓದಿ ಮುಗಿಸುವುದರೊಳಗೆ ನನ್ನ ಆದರ್ಶ ದೈವವಾಗಿಬಿಟ್ಟಿತ್ತು!
 
ವೀರ ಸಾವರ್ಕರ್!
                ಆ ಹೆಸರು ಕೇಳಿದೊಡನೆ ಶಕ್ತಿಯ ಒಂದು ಪ್ರವಾಹವೇ ದೇಹವಿಡೀ ಸಂಚರಿಸಿದಂತಾಗುತ್ತದೆ. ಭಾವತೀವ್ರತೆಯಿಂದ ಮನಸ್ಸು ಆ ಮಹಾಪುರುಷನನ್ನು ಪ್ರತ್ಯಕ್ಷ ನೋಡಲು ಹಪಹಪಿಸುತ್ತದೆ. ಅಬ್ಬಾ ಎಂತಹ ವ್ಯಕ್ತಿತ್ವ ಅದು! ಹಿಮಾಲಯದಂತೆ ಹಬ್ಬಿ ನಿಂತ ಎತ್ತರದ ವ್ಯಕ್ತಿ. ನಿರಂತರ ಅಂತಃಪ್ರವಾಹವಾಗಿ ದಶದಿಕ್ಕುಗಳಿಗೂ ಹರಿದ ಪ್ರತಿಭೆ ಕರ್ತೃತ್ವ. ಅಪಾರ ವಿದ್ವತ್ತಿನ ಅನುಪಮ ಸತ್ವ. ವಿದ್ವತ್ತಿನ ನಿರ್ಘಾತದಂತೆ ಅಡಿಗಡಿಗೂ ಸಿಡಿಯುವ ಪ್ರಖರ ಸ್ವತ್ವ. ಅದು ದೇಶಪ್ರೇಮದ ಖಜಾನೆ. ಸಾಹಿತ್ಯದ ಖನಿ. ಕಾವ್ಯ, ವಾಕ್ಚಾತುರ್ಯ, ಸಂಘಟನಾ ಶಕ್ತಿಯ ಗಣಿ. ಓ ಸ್ವಾತಂತ್ರ್ಯ ವೀರ ನೀನೆನಗೆ ಧಣಿ. ಓ ಹುಲು ಮಾನವ ನೀನವಗೆ ಮಣಿ. ಅದು ಭವ್ಯ ಭಾರತದ ಮುಕುಟಮಣಿ!
 
    ಅನೇಕ ಬಾರಿ ನಾನು ಯೋಚನೆಗೆ ಬಿದ್ದದ್ದಿದೆ, ಒಬ್ಬ ವ್ಯಕ್ತಿಯಿಂದ ಇಷ್ಟೆಲ್ಲಾ ಸಾಧಿಸಲು ಸಾಧ್ಯವೇ? ಒಂದೊಂದು ಘಟನೆ ನೆನಪಿಸಿಕೊಳ್ಳಿ.
 
೧. ಇನ್ನೂ ಬುದ್ದಿ ಬೆಳೆಯದ ವಯಸ್ಸಿಗೆ ” ಅಮ್ಮಾ ಭವಾನಿ, ಅಮ್ಮನನ್ಯಾಕೆ ಬಲಿ ತೊಗೊಂಡೆ. ಅಮ್ಮನ ಬದಲು ನನ್ನನ್ನು ಬಲಿ ತೆಗೆದುಕೋ” ಎಂದು ಅರ್ಧ ರಾತ್ರಿಯಲ್ಲಿ ಕಾಳಿಯ ವಿಗ್ರಹದ ಬಳಿ ಕುಳಿತು ಪ್ರಾರ್ಥಿಸಿತು ಹಾಲುಗಲ್ಲದ ಮಗು!
೨. ಎಲ್ಲರೂ ಛಾಪೇಕರ್ ಸಹೋದರರು ಕೊಲೆಗಡುಕರು ಎಂದು ಜರೆಯುತ್ತಿದ್ದಾಗ “ಇಲ್ಲ, ಅವರು ಅಪ್ರತಿಮ ದೇಶಭಕ್ತರು. ಅವರು ಮಾಡಿದ್ದು Randನ ಕೊಲೆಯಲ್ಲ. ಅದು ವಧೆ, ಸಂಹಾರ” ಎಂದ ಹುಡುಗ.
೩.ನಟ್ಟ ನಡು ರಾತ್ರಿ ತಾಯಿ ಭವತಾರಿಣಿಯಿಂದ ದೇಶಸೇವೆಯ ಆತ್ಮಾಹುತಿಯ ದೀಕ್ಷೆ ದೊರಕಿಸಿಕೊಂಡ ೧೩ ವರ್ಷದ ಹುಡುಗ.
೪. ತನ್ನದೇ ಔಷಧ ಕ್ರಮದಿಂದ ತನ್ನನ್ನೂ ಅತ್ತಿಗೆಯನ್ನೂ ಪ್ಲೇಗಿನಿಂದ ಉಳಿಸಿಕೊಂಡು, ಅಣ್ಣ ಬಾಬಾ ಹಾಗೂ ತಮ್ಮ ಬಾಳಾನನ್ನು ಬದುಕಿಸಿಕೊಂಡ ೧೫ ವರ್ಷದ ಪೋರ.
೫. ಮಿತ್ರಮೇಳ ಎಂಬ ಸಂಘಟನೆ ಸ್ಥಾಪಿಸಿ ಪುಂಡು ಪೋಕರಿಗಳನ್ನು ಹಿಂಡು ಹಿಂಡಾಗೆ ದೇಶಭಕ್ತರನ್ನಾಗಿಸಿದ ಗಂಡುಗಲಿ.
 
೬. ದಾಸ್ಯವೇ ಶ್ರೇಷ್ಠ, ಇಂಗ್ಲೀಷರೇ ದೇವರು, ಮನವಿಗಳೇ ಪೂಜೆ, ಅವರು ಕೊಡೋ ಶಿಕ್ಷೆಯೇ ಪ್ರಸಾದ ಎಂದು ಜನರೆಲ್ಲಾ ತಮ್ಮ ಕ್ಷಾತ್ರತೇಜ ಕಳೆದುಕೊಂಡಿದ್ದಾಗ ಸ್ವಾತಂತ್ರ್ಯವೇ ಶ್ರೇಷ್ಠ, ಭಾರತಿಯೇ ತಾಯಿ, ಕ್ರಾಂತಿಯೇ ಪೂಜೆ, ಆತ್ಮಾಹುತಿಯೇ ಪ್ರಸಾದ ಎಂದು “ಅಭಿನವ ಭಾರತ” ಎಂಬ ನವಪೀಳಿಗೆಯನ್ನು ಸಂಘಟಿಸಿದ ವೀರ.
೭. ದೇಶಭಕ್ತಿಯ ಅಪರಾಧಕ್ಕಾಗಿ ಭಾರತೀಯ ಮಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊಟ್ಟಮೊದಲ ವಿದ್ಯಾರ್ಥಿ.
೮. ಭಾರತದಲ್ಲಿ ವಿದೇಶೀ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿದ ಮೊಟ್ಟ ಮೊದಲ ಸ್ವದೇಶಾಭಿಮಾನಿ.
೯. ಸ್ವರಾಜ್ಯ ಎಂದುಚ್ಚರಿಸುವುದೇ ಮಹಾಪರಾಧವಾಗಿದ್ದ ಕಾಲದಲ್ಲಿ ” ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ” ಎಂದು ಘೋಷಿಸಿದ ಮೊಟ್ಟ ಮೊದಲ ರಾಜಕೀಯ ಮುಂದಾಳು.
೧೦. ದಾಸ್ಯರಕ್ಕಸನ ಎದೆಮೆಟ್ಟಲು ಪ್ರಯತ್ನ ಪಟ್ಟುದ್ದಕ್ಕಾಗಿ ತಾನು ಗಳಿಸಿದ ಬಿಎ ಪದವಿಯನ್ನು ಕಳೆದುಕೊಂಡ ಮೊಟ್ಟ ಮೊದಲ ಭಾರತೀಯ ಪದವೀಧರ.
 
೧೧. ಕ್ರಾಂತಿಕಾರಿ ಚಟುವಟಿಕೆಗಳನ್ನು ನದೆಸಿದ ಕಾರಣಕ್ಕಾಗಿ ಬ್ರಿಟಿಷರಿಂದ ಬ್ಯಾರಿಸ್ಟರ್ ಪದವಿ ನಿರಾಕರಿಸಲ್ಪಟ್ಟ ಮೊಟ್ಟ ಮೊದಲ ಬ್ಯಾರಿಸ್ಟರ್.
೧೨. ಹಿಂದೂಸ್ಥಾನದ ಸ್ವಾತಂತ್ರ್ಯದ ಪ್ರಶ್ನೆ ಪರರಾಷ್ಟ್ರಗಳಲ್ಲೂ ಮಹತ್ವಗಳಿಸುವಂತೆ ಮಾಡಿದ ಮೊಟ್ಟಮೊದಲ ಭಾರತೀಯ ತರುಣ.
೧೩. ಪ್ರಕಟಣೆಗೆ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ ರಚಿಸಿದ ಮೊಟ್ಟ ಮೊದಲ ಲೇಖಕ.
೧೪. ಬ್ರಿಟಿಷರ ನ್ಯಾಯಾಲಯವನ್ನು ತಾನು ಪುರಸ್ಕರಿಸುವುದಿಲ್ಲವೆಂದು ಸಾರಿದ ಪ್ರಪ್ರಥಮ ರಾಜಕೀಯ ಆರೋಪಿ.
೧೫. ಜಗತ್ತಿನ ರಾಜಕೀಯ ಇತಿಹಾಸದಲ್ಲೇ ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯದೆದುರು ತನ್ನ ಬಗ್ಗೆ ಮೊಕದ್ದಮೆ ನಡೆಯುವಂತೆ ಮಾಡಿದ ಮೊಟ್ಟ ಮೊದಲ ರಾಜಕೀಯ ಕೈದಿ.
 
೧೬. ವಿಶ್ವದ ರಾಜಕೀಯ ಚರಿತ್ರೆಯಲ್ಲೇ ೫೦ ವರ್ಷಗಳ, ಎರಡೆರಡು ಕರಿನೀರ ಶಿಕ್ಷೆಗೆ ಗುರಿಯಾದ ಮೊಟ್ಟಮೊದಲ ರಾಜಕೀಯ ಸೆರೆಯಾಳು.
೧೭. ಅತೀ ಸಣ್ನ ಕಿಂಡಿಯ ಮುಖಾಂತರ ತನ್ನ ಯೋಗಾಭ್ಯಾಸದ ಬಲದಿಂದ ಶರೀರವನ್ನು ಸಂಕುಚಿಸಿ ಹಡಗಿನಿಂದ ಜಿಗಿದು ಸಮುದ್ರ ಈಜಿದ ಸಾಹಸಿ.
 
 
 
 
೧೮. ಬರವಣಿಗೆಗೆ ಅಗತ್ಯವಾದ ಸಾಮಗ್ರಿಗಳಾಗಲೀ, ಸೌಲಭ್ಯಗಳಾಗಲೀ ಇಲ್ಲದಿದ್ದರೂ, ಬರೆಯುವುದನ್ನು ನಿಷೇಧಿಸಲಾಗಿದ್ದರೂ ಜೈಲುಖಾನೆಯ ಗೋಡೆಗಳ ಮೇಲೆ ಮೊಳೆಯಿಂದಲೇ ಹತ್ತು ಸಹಸ್ರ ಸಾಲುಗಳ ಕಾವ್ಯ ರಚಿಸಿ ಬಾಯಿ ಪಾಠ ಮಾಡಿ ೧೪ ವರ್ಷಗಳ ಸೆರೆವಾಸದ ನಂತರ ಅದನ್ನು ಸುರಕ್ಷಿತವಾಗಿ ದೇಶಕ್ಕೆ ಒಪ್ಪಿಸಿದ ವಿಶ್ವದ ಮೊಟ್ಟಮೊದಲ ಮಹಾಕವಿ!
೧೯. ಅದು ದಂಗೆ ಅಲ್ಲ. ಭಾರತದ ಸ್ವಾತಂತ್ರ್ಯ ಸಂಗ್ರಾಮ ಎಂದು ಸಾರಿ ಅದರ ಬಗ್ಗೆ ಸಾಕ್ಷ್ಯಾಧಾರಿತ ಗ್ರಂಥ ಬರೆದ ಪ್ರಪ್ರಥಮ ವ್ಯಕ್ತಿ.
೨೦. ತಾನು ಮಾತ್ರವಲ್ಲದೆ ತನ್ನ ಪರಿವಾರ, ಬಂಧುಬಳಗ, ಸ್ನೇಹಿತ ವರ್ಗ ಮಾತ್ರವಲ್ಲ ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸಹಸ್ರ ಸಹಸ್ರ ಭಾರತೀಯರನ್ನು ಕ್ರಾಂತಿಕಾರಿಗಳನ್ನಾಗಿಸಿ ಸ್ವಾತಂತ್ರ್ಯ ಯಜ್ಞಕ್ಕೆ ಹವಿಸ್ಸನ್ನಾಗಿಸಿದ ಅಧ್ವರ್ಯು.
 
೨೧. ಸಿಂಹದ ಗುಹೆಯೊಳಗೆ ನುಗ್ಗಿ ಅದರ ಕೇಸರ ಹಿಡಿದು ಬಡಿದ ನರಸಿಂಹ.
೨೨. ಇತಿಹಾಸಕಾರ, ಅಪ್ರತಿಮ ವಾಗ್ಮಿ, ಭಾಷಾ ಶುದ್ಧಿಕಾರ, ಶುದ್ಧಿ ಚಳುವಳಿಯ ನೇತಾರ, ಪಂಚಾಂಗದ ಸುಧಾರಕ, ಸಾಗರ ಈಜಿದ ಶೂರ, ಕಾದಂಬರಿಕಾರ, ಕಾವ್ಯ ಸುಧಾರಕ, ನಾಟಕಕಾರ, ನಿಬಂಧಕ, ಧರ್ಮ ಸುಧಾರಕ.
೨೩. ನಿಮಗೆ ಅಚ್ಚರಿಯಾಗಬಹುದು. ಸಾವರ್ಕರ್ ನೀವೀಗ ಬಳಸುವಂತಹ ಅನೇಕ ಪದಗಳನ್ನು ಸೃಷ್ಟಿ ಮಾಡಿದರು. ಕೆಲವು ರೂಢಿರಹಿತ ಪದಗಳನ್ನು ಕೂಡಾ ಬಳಕೆಗೆ ತಂದರು. ಅಂತಹ ಕೆಲವು ಪದಗಳು:
ಮಹಾವಿದ್ಯಾಲಯ, ಪ್ರಾಚಾರ್ಯ, ಪ್ರಾದ್ಯಾಪಕ, ಪ್ರಭೋಧಿಕ, ವಾಯುದಳ, ದೂರಧ್ವನಿ, ದ್ವನಿಕ್ಷೇಪಕ, ವಿಧಿಮಂಡಲ, ಅರ್ಥ ಸಂಕಲ್ಪ, ಚಿತಪಠ, ನೇಪಥ್ಯ, ಛಾಯಾಚಿತ್ರ, ದಿಗ್ದರ್ಶಕ, ಕ್ರಮಾಂಕ, ದಿನಾಂಕ, ವಾಚನಾಲಯ, ಉಪಸ್ಥಿತ, ಮಹಾಪೌರ, ವ್ಯಂಗ್ಯಚಿತ್ರ, ವಿಶೇಷಾಂಕ, ಲಾಭಾಂಶ, ಭಾಗಾಂಶ, ಸಂಸತ್ತು, ಲೋಕಸಭಾ, ನಗರಪಾಲಿಕಾ, ಮಹಾಪಾಲಿಕಾ, ಹುತಾತ್ಮ, ಉಚ್ಛಾಂಕ, ನಭೋವಾಣಿ, ಸಚಿವಾಲಯ, ಸ್ಥಾನಕ, ರುಗ್ಣಾಲಯ, ಪ್ರಮಾಣಪತ್ರ,….ಇತ್ಯಾದಿ
೨೪. ವಿಗ್ರಹಗಳನ್ನು ಒಡೆಯುತ್ತಾ ಹೋರಾಟ ನಡೆಸುತ್ತಿದ್ದ ಸುಭಾಷರನ್ನು ಕರೆದು ಹೊರದೇಶಗಳಿಗೆ ತೆರಳಿ ಸೈನ್ಯ ಕಟ್ಟಿ ಹೋರಾಟ ನಡೆಸುವಂತೆಯೂ ಅಲ್ಲಿ ತಮಗೆ ರಾಸ್ ಬಿಹಾರಿ ಬೋಸ್, ಲಾಲಾ ಹರದಯಾಳ್ ಸಹಾಯ ಮಾಡುತ್ತಾರೆಂದು ತಿಳಿಸಿ ಸುಭಾಷರಮ್ ಅಂತಿಮ ಹೋರಾಟಕ್ಕೆ ಶಿಲಾನ್ಯಾಸ ಮಾಡಿದರು.
೨೫. ಸಾವರ್ಕರ್ ಬರೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಗ್ರಂಥ ಕ್ರಾಂತಿಸಂಘಟನೆಗಳಿಗೆ ಭಗವದ್ಗೀತೆಯಾಯಿತು.
 
೨೬. ನಾಥೂರಾಮ ಗೋಡ್ಸೆಯಂತಹ ಅನೇಕ ಅಪ್ಪಟ ಭಾರತ ಭಕ್ತರಿಗೆ ಗುರುವಾದರು.
೨೭. ಹಿಂದೂ ಮಹಾಸಭಾವನ್ನು ಕಟ್ಟಿ ಬೆಳೆಸಿದರು. ಸೈನ್ಯದಲ್ಲಿ ಹಿಂದೂಗಳು ಹೆಚ್ಚು ಹೆಚ್ಚು ಸೇರಿಕೊಳ್ಳಬೇಕೆಂದು ಕರೆಯಿತ್ತರು.
೨೮. ಅಸ್ಪೃಷ್ಯತೆ ತಾಂಡವವಾಡುತ್ತಿದ್ದ ಕಾಲದಲ್ಲಿ ಎಲ್ಲರ ವಿರೋಧದ ನಡುವೆ ” ಪತಿತ ಪಾವನ ” ಮಂದಿರ ನಿರ್ಮಿಸಿ ಅಲ್ಲಿ ಎಲ್ಲ ಹಿಂದೂಗಳಿಗೂ ಮುಕ್ತಪ್ರವೇಶ ದೊರಕಿಸಿಕೊಟ್ಟರು.
೨೯. ಚಳುವಳಿ ಎಂಬುದನ್ನು ಮೊದಲು ಹುಟ್ಟು ಹಾಕಿದ್ದೇ ಸಾವರ್ಕರ್. ಅಂಡಮಾನಿನಲ್ಲಿ ಗಾಣ ಎಳೆಯುತ್ತಾ ಕರಿನೀರ ಶಿಕ್ಷೆ ಅನುಭವಿಸುತ್ತಿದ್ದ ಕಾಲಕ್ಕೆ ಕೈದಿಗಳಿಗೆ ಉತ್ತಮ ಆಹಾರ, ಆರೋಗ್ಯ ಹಾಗೂ ಗೌರವ ದೊರಕಿಸಿಕೊಡುವ ಸಲುವಾಗಿ ಚಳವಳಿ ಆರಂಬಿಸಿದರು. ಹಿಂದೂಗಳನ್ನು ಕಾರಗೃಹದಲ್ಲಿ ಅನಾಯಾಸವಾಗಿ ಮತಾಂತರ ಮಾಡುತ್ತಿದ್ದ ಮುಸಲ್ಮಾನರ ವಿರುದ್ಧ ತೊಡೆತಟ್ಟಿ ಶುದ್ದಿ ಚಳವಳಿ ನಡೆಸಿದರು.
 
 
 
        ಹೇಳುತ್ತಾ ಹೋದಂತೆ ಮುಗಿಯದ ಕಥನವಿದು…ಸಾವರ್ಕರ್ ಎಂದರೆ ಹಾಗೆಯೇ ಅವರು ಯಾವ ಕ್ಷೇತ್ರವನ್ನು ಪ್ರವೇಶಿಸಿದರೂ ಅಲ್ಲೊಂದು ಕ್ರಾಂತಿಯಾಗುತ್ತಿತ್ತು. ಅದು ಮುಕ್ತ ಸಮಾಜವಿರಲಿ, ಅಮುಕ್ತ ಕಾರಾಗೃಹವಿರಲಿ…ಎಲ್ಲೆಡೆಯೂ ಕ್ರಾಂತಿ…ಆಜ್ಯ…ಹವಿಸ್ಸು…ತರ್ಪಣ…ಆತ್ಮಾಹುತಿ
ಶಿವಾಜಿಯ ಅಪರಾವತಾರವದು!
ಇಂದವರ ೧೩೦ನೇ ಜನ್ಮದಿನದಂದು ನೆನಪಿಸಿಕೊಳ್ಳುವ ಸಣ್ಣ ಪ್ರಯತ್ನ.
ವಂದೇ ಮಾತರಂ…ಸ್ವಾತಂತ್ರ್ಯ ಲಕ್ಷ್ಮೀ ಕೀ ಜೈ…
 
 
 ಪೂರ್ಣಾಹುತಿ:     ಇಂದಿರಾ ಗಾಂಧಿ ಜೈಲಿನಲ್ಲಿದ್ದ ತನ್ನ ತಂದೆಯನ್ನು ನೋಡಿ ಬಂದು ಬರೆಯುತ್ತಾಳೆ ಅಲ್ಲಿದ್ದದ್ದು ಒಂದೇ ಒಂದು ಮಂಚ, ನಾಲ್ಕೇ ನಾಲ್ಕು ಕುರ್ಚಿ, ಒಂದು ಮೇಜು!
ಇದೆಂತಹಾ ಜೈಲು ಶಿಕ್ಷೆ ಸ್ವಾಮಿ? ಅಂಡಮಾನಿನ ಕರಿನೀರ ಶಿಕ್ಷೆಯೆಲ್ಲಿ ಇದೆಲ್ಲಿ? ಗಾಣ ಎಳೆಯುತ್ತಾ, ಹುಳು ಹುಪ್ಪಟೆಗಳು ಬೆರಕೆಯಾಗಿರೋ ಆಹಾರ ತಿನ್ನುತ್ತಾ ಕೈಯಲ್ಲಿ ತೆಂಗಿನ ನಾರು ತೆಗೆದು ಗೋಣಿಚೀಲ ಹೊಲಿಯುತ್ತಾ ಪಟ್ಟ ಕಷ್ಟ ಕೋಟಲೆಯನ್ನು ಯಾವ ಪಠ್ಯ ಪುಸ್ತಕದಲ್ಲಿ ಪ್ರಕಟಿಸುತ್ತಾರೆ?

ಅವನು ಬರುತ್ತಲೇ ಇದ್ದಾನೆ

 

ಅವನು ಬರುತ್ತಲೇ ಇದ್ದಾನೆ

ಮೇಘ ಮಾಲೆ
ಘೋರ ಮೇಘ ಕದನ
ಅವನಿಗವನೇ ಮದನ
ಅರಳಿತವಳ ವದನ
–ಅವನು ಬರುತ್ತಲೇ ಇದ್ದಾನೆ||

ಮೇಘ ಪ್ರಳಯ
ಬಾನು ಕ್ರೋಧ ತಳೆಯೆ
ಅವನು ಹರುಷದೊಳಿಳಿಯೆ
ಅವಳ ಬೇಸರ ಕಳೆದ
–ಅವನು ಬರುತ್ತಲೇ ಇದ್ದಾನೆ||

ತರಣಿ ಮರೆಯಾಗೆ
ಮೇಘ ಗುಂಪಾಗೆ
ಅವನು ಸೊಂಪಾಗೆ
ಧರಣಿ ತಂಪಾಗೆ
ಅರಳಿತು ಮಮ ಸದನ
–ಅವನು ಬರುತ್ತಲೇ ಇದ್ದಾನೆ||

ಸ್ವಾತಂತ್ರ್ಯದ ದಿವ್ಯಾಗ್ನಿ: ಹವಿಸ್ಸು-೧

ಸ್ವಾತಂತ್ರ್ಯದ ದಿವ್ಯಾಗ್ನಿ: ಹವಿಸ್ಸು:
 
ಏಡನ್!
ಅಲ್ಲಿ ಫಡಕೆ(ವಾಸುದೇವ ಬಲವಂತ ಫಡಕೆ)ಯ ಕಿಡಿ ಆರಿತು.
 
ಭಗೂರು!
ಇಲ್ಲಿ ಅದೇ ಕಿಡಿ ಜ್ವಾಲೆಯಾಗಿ ಸ್ವಾತಂತ್ರ್ಯ ವೀರನಾಗಿ ಸ್ವಾತಂತ್ರ್ಯದ ದಿವ್ಯಾಗ್ನಿ ಮೊರೆಯಿತು.
 
 
 
            ನಟ್ಟ ನಡು ರಾತ್ರಿ. ಕಡುಗತ್ತಲಲ್ಲೂ ಹೊಳೆಯುತ್ತಿದೆ ಭವತಾರಿಣಿಯ ಭವ್ಯ ವಿಗ್ರಹ. ಮಂದಾಸನದಲ್ಲಿ ಮಂಡಿಸಿ ಮಂದಹಾಸ ಬೀರುತ್ತಿದ್ದಾಳೆ ಮಹಾತಾಯಿ. ನೀಲಾಂಜನದಲ್ಲಿ ಮಂದ ಪ್ರಕಾಶದಿಂದ ಪ್ರಶಾಂತವಾಗಿ ಬೆಳಗುತ್ತಿದೆ ತುಪ್ಪದ ದೀಪ. ಹದಿಮೂರು ವರ್ಷದ ಹುಡುಗನೊಬ್ಬ ಪದ್ಮಾಸನ ಹಾಕಿ ಕುಳಿತು ಧ್ಯಾನಸ್ಥನಾಗಿದ್ದಾನೆ. ಹಾಲುಗಲ್ಲದ ಹುಡುಗ ತಾಯಿಯನ್ನು ಪ್ರಶ್ಣಿಸುತ್ತಿದ್ದಾನೆ…
 
   “ಅಮ್ಮಾ, ಛಾಪೇಕರ್ ಸಹೋದರರನ್ನು ಕೊಲೆಗಡುಕರು ಅಂತಾ ಜನ ಹೇಳುತ್ತಿದ್ದಾರೆ! ಅದನ್ನು ನೀನು ಒಪ್ಪುತ್ತೀಯಾ?
   
                  ನನಗ್ಗೊತ್ತು. ನೀನಿದನ್ನು ಖಂಡಿತಾ ಒಪ್ಪಲಾರೆ. ರಕ್ಕಸ ಪ್ಲೇಗಿನಿಂದ ಹಾಗೂ ಕ್ಷಾಮದಿಂದ ಜನ ತತ್ತರಿಸಿರುವಾಗ ನಿನ್ನನ್ನು ಸಂಕಲೆಗಳಿಂದ ಬಂಧಿಸಿರುವ ಮಹಾರಕ್ಕಸರು ನಿನ್ನ ಮಕ್ಕಳನ್ನು ಬದುಕಿದವರು ಸತ್ತವರು ಎನ್ನದೇ ಜೀವಂತ ಸುಡುತ್ತಿರುವಾಗ, ಮನೆ ಮನೆ ದೋಚಿ ನಿನ್ನದೇ ಬಾಲೆಯರನ್ನು ಬಲಾತ್ಕರಿಸುತ್ತಿರುವಾಗ, ಮನೆ ಮನೆಯನ್ನೇ ಸುಟ್ಟು ವಿಕೃತ ಆನಂದ ಪಡುತ್ತಿರುವಾಗ ನಿನ್ನ ಕಣ್ಣೀರನ್ನು ಒರೆಸ ಬಂದವರ ಕಾರ್ಯವನ್ನು ತಪ್ಪೆಂದು ಹೇಗೆ ಹೇಳಬಲ್ಲೆ? ಅಮ್ಮಾ ಸ್ವಂತದ ಸುಖಕ್ಕಾಗಿ ಒಬ್ಬನನ್ನು ಕೊಂದರೆ ಅದು ಕೊಲೆ. ಸರ್ವರ ಹಿತಕ್ಕಾಗಿ ಅಂದರೆ ಸಮಾಜದ, ದೇಶದ ಹಿತಕ್ಕಾಗಿ ಒಬ್ಬನನ್ನು ಕೊಂದರೆ ಅದು ಕೊಲೆಯಲ್ಲ. ವಧೆ! ಸಂಹಾರ! ರಾಮ ರಾವಣನನ್ನು ವಧಿಸಿದ, ಕೃಷ್ಣ ಕಂಸಾದ್ಯರನ್ನು ಸಂಹರಿಸಿದ. ಸ್ವತಃ ನೀನೆ ಶುಂಭ ನಿಶುಂಭಾದ್ಯರನ್ನು ಸಂಹರಿಸಿಲ್ಲವೆ. ಅದೇ ರೀತಿ ಇದು.
 
                 ಅಮ್ಮಾ ಫಡಕೆ ಆರಂಭಿಸಿದ ದೀಕ್ಷೆ ಮುಂದುವರೆಸುವವರ್ಯಾರೆಂದು ಚಿಂತಿಸಬೇಡ. ನಾನು ಪ್ರತಿಜ್ಞೆ ಮಾಡುತ್ತಿದ್ದೇನೆ. ಇನ್ನು ಮುಂದೆ ನನ್ನೀ ಜೀವನ ನಿನ್ನನ್ನು ದಾಸ್ಯದಿಂದ ಬಿಡುಗಡೆ ಮಾಡಲು ಮುಡಿಪಾಗಿಡುವೆ. ಕೇವಲ ನಾನು ಮಾತ್ರವಲ್ಲ ನನ್ನ ಪರಿವಾರ, ಬಂಧು-ಬಳಗ, ಸ್ನೇಹಿತ ವರ್ಗ ಮಾತ್ರವಲ್ಲ ನನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಎಲ್ಲವನ್ನೂ ಸ್ವಾತಂತ್ರ್ಯ ಯಜ್ಞಕ್ಕೆ ಹವಿಸ್ಸಾಗಿ ಅರ್ಪಿಸುತ್ತೇನೆ. ವಂದೇ ಮಾತರಂ…
ಸ್ವಾತಂತ್ರ್ಯ ಲಕ್ಷ್ಮೀ ಕೀ ಜೈ…”
 
                ಚೈತನ್ಯದ ಸ್ತ್ರೋತವೊಂದು ಭವತಾರಿಣಿಯ ಪಾದ ಹಿಡಿದ ಆ ಪುಟ್ಟ ಹಸ್ತಗಳ ಮೂಲಕ ತನುವಿನಾದ್ಯಂತ ಸಂಚರಿಸಿ ಅಂತಃಕರಣವನ್ನು ಪುಳಕಿತಗೊಳಿಸಿತು. ಅದು ಕೋಲ್ಮಿಂಚು! ಅದು ಮಾತೆಯ ಅನುಗ್ರಹ!
 
ಯಾರೀ ಹುಡುಗ???!!!!!
 
                    ಅವನ ಓರಗೆಯ ಹುಡುಗರು ಆಡಿಕೊಂದಿರಬಹುದಾದ ವಯಸ್ಸಿಗೇ ಪ್ರತಿಜ್ಞೆ ಮಾಡುತ್ತಿದ್ದಾನಲ್ಲ! ತಾಯಿಯ ಬಗ್ಗೆ, ದೇಶದ ಬಗ್ಗೆ, ತತ್ವಗಳ ಬಗ್ಗೆ, ಮೌಲ್ಯಗಳ ಬಗ್ಗೆ, ಧರ್ಮದ ಬಗ್ಗೆ, ರಾಜತಾಂತ್ರಿಕತೆಯ ಬಗ್ಗೆ, ಸ್ವಾತಂತ್ರ್ಯದ ಬಗ್ಗೆ  ಮಾತಾಡುತ್ತಿದ್ದಾನಲ್ಲ!
 
“ಸ್ವಜನಳಾತೇ ಐಕುನಿ ಹೋತಿ ತಪ್ತ ತರುಣ ತೇ ಅರುಣ ಜಣೇ
ದೇಶ ಸಾಠೀ ಪ್ರಾಣಾ ದೇತಿ ಧನ್ಯ ಧನ್ಯ ತ್ಯಾ ಕಾ ನ್ಹ ಮಣೇ? ||
ಶತಾವಧೀ ತೇ ಜನ್ಮಾಯೇತಿ ಮರೋನಿ ಜಾತೀ ಗಣತೀ
ದೇಶಸಾಠೀ ಮರತೀ ತ್ಯಾಂಸೀ ದೇಶಪಿತೇ ಕಿ ಬುಧ ಮ್ಹಣತೀ||”
 
ಎಂದು ಆ ನಡು ರಾತ್ರಿಯಲ್ಲಿ ಸ್ವಾತಂತ್ರ್ಯ ಕಾವ್ಯ ಸೃಷ್ಠಿ ಮಾಡುತ್ತಿದ್ದಾನಲ್ಲ!
 
“ಕಾರ್ಯ ಸೋಡುನಿ ಅಪುರೇ ಪಡತಾ ಝಂಜತ?ಖಂತಿ ನಕೋ| ಫುಢೇ
ಕಾರ್ಯ ಚಾಲವೂ ಗಿರವಿತ ತುಮಚ್ಯಾ ಪರಾಕ್ರಮಾಚೇ ಆಮ್ಹೀ ಧಡೇ||”
 
ಎಂದು ಛಾಪೇಕರ್ ಸಹೋದರರಿಗೆ ವಚನ ಕೊಡುತ್ತಿದ್ದಾನಲ್ಲ!
ಯಾರವನು?
 
ಮತ್ಯಾರಿರಲು ಸಾಧ್ಯ? ಎಳವೆಯಲ್ಲೇ ಅಂಥಾ ಚಿಂತನೆ ಮತ್ಯಾರಿಗೆ ಬರಲು ಸಾಧ್ಯ?
ತಾತ್ಯಾ!
ಇತಿಹಾಸದಲ್ಲಿ ಸ್ವಾತಂತ್ರ್ಯ ವೀರನೆಂದೇ ಕರೆಸಿಕೊಂಡ ಏಕೈಕ ವ್ಯಕ್ತಿ….ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್!
 
                  ಹೌದು. ಮಹಾರಾಷ್ಟ್ರದಾದ್ಯಂತ ಘೋರ ಕ್ಷಾಮ ತಲೆದೋರಿತ್ತು. ಆಗಲೇ ಕಾಲಿಟ್ಟಿತ್ತು ಪ್ಲೇಗ್. ನಾಸಿಕದ ಕಲೆಕ್ಟರ್ Rand ಎಂಬ ದುರುಳ ಪ್ಲೇಗಿಗಿಂತಲೂ ಹೆಮ್ಮಾರಿಯಂತೆ ವರ್ತಿಸುತ್ತಿದ್ದ. ಒಂದು ಮನೆಯಲ್ಲಿ ಯಾರಿಗಾದರೂ ರೋಗ ಕಾಣಿಸಿಕೊಂಡರೆ ಆ ಮನೆಯವರಿಗೆಲ್ಲರಿಗೂ ಬಹಿಷ್ಕಾರ ಹಾಕಿ ಊರ ಹೊರಗೆ ಹಾಕಲಾಗುತ್ತಿತ್ತು. ರೋಗದಿಂದ ಸತ್ತವರ ಜೊತೆ ಆರೋಗ್ಯವಂತರನ್ನೂ ಜೀವಂತ ಸುಡಲಾಗುತ್ತಿತ್ತು. ಸ್ತ್ರೀಯರ ಮಾನಭಂಗ, ಆಸ್ತಿ ಪಾಸ್ತಿ ಲೂಟಿ, ಮನೆ ಮನೆಗೇ ಬೆಂಕಿ ಹಚ್ಚುವ ಕಾರ್ಯ ಯಥೇಚ್ಛವಾಗಿ ನಡೆಯಿತು. ಸಿಡಿದೆದ ಛಾಪೇಕರ್ ಸಹೋದರರು( ದಾಮೋದರ ಹಾಗೂ ಬಾಲಕೃಷ್ಣ ) ಕುದಿದು ಛಾಪೇಕರ್ ಕ್ಲಬ್ ಸ್ಥಾಪಿಸಿ ಶಸ್ತ್ರಾಸ್ತ್ರ ಸಂಗ್ರಹಿಸಿ Randನ ಸಂಹಾರ ಮಾಡಿದರು. ಮಾಹಿತಿ ಕೊಟ್ಟ ಗಣೇಶ ಶಂಕರ ದ್ರವಿಡ ಎಂಬ ದ್ರೋಹಿಗೆ ಛಾಪೇಕರ್ ಪಾಳಯದ ಮರಿಸಿಂಹ ವಾಸುದೇವ ಛಾಪೇಕರ್ ತಕ್ಕ ಶಿಕ್ಷೆ ವಿಧಿಸಿತು. ಮೂವರೂ ಸಂತೋಷದಿಂದ ನೇಣುಗಂಬಕ್ಕೆ ಕೊರಳೊಡ್ಡಿದರು. ಆದರೆ ಜನ ತಮ್ಮ ರಕ್ಷಣೆಗಾಗಿ ಮಡಿದ ಆ ವೀರರನ್ನೇ ಕೊಲೆಗಡುಕರೆಂದು ಕರೆದು ಅವಮಾನಿಸಿದರು.
 
ಅಂತಹ ಸಂದರ್ಭದಲ್ಲೇ ಈ ಬಾಲ ತಾಯಿಯ ಪದತಲದಲ್ಲಿ ಪ್ರತಿಜ್ಞೆ ಮಾಡಿದ್ದು. ಅದೂ ನಟ್ಟ ನಡು ರಾತ್ರಿ!
 
ಮುಂದುವರಿಯುವುದು…

ಚೈತ್ರ ಸುಮ

 

ಚೈತ್ರ ಕಾಲದಲ್ಲಿ ಮೂಡಿದುದಲ್ಲ. ಯಕ್ಷಗಾನ ಪದವೊಂದರ ಮೊದಲ ಸಾಲನ್ನು ಗುನುಗುನಿಸುತ್ತಾ ಇದ್ದಂತೆ ಮೂಡಿದ ಕವನ ಇದು. ಅದೇ ಪದ್ಯದ ಮೊದಲ ಸಾಲನ್ನು ಬಳಸಿಕೊಂಡದ್ದಕ್ಕಾಗಿ ಆ ಅಜ್ಞಾತ ಕವಿಯಲ್ಲಿ ಕ್ಷಮೆ ಯಾಚಿಸುತ್ತಿದ್ದೇನೆ. ಈ ಕವನಕ್ಕೆ ಕಾರಣೀಭೂತನಾದ ಆ ಅಜ್ಞಾತ ಕವಿಗೆ ಪ್ರಣಾಮಗಳನ್ನರ್ಪಿಸುತ್ತ…ಒಂದು ಕಿರು ಕವನ!

ನೋಡು ನೋಡು ಗೆಳತಿ ಚೈತ್ರ ಕಾಲ ಬಂದಿದೆ
ಮೋಡಿ ಮಾಡಿ ಎನ್ನ ಮನದಿ ಹರುಷ ತುಂಬಿದೆ
ನೋಡು ನೋಡು ಗೆಳತಿ ನೋಡು ವನದ ಸೊಬಗನು
ಶ್ವೇತ ಧಾರೆ ಹಸುರ ಸೀರೆ ಸ್ವರ್ಗ ಸಿರಿಯನು||

ನಿನ್ನ ಕಾದಿರೆ ಸುಪ್ರಭಾತ ನದಿಯ ಕಲರವ
ಮನವ ಬಳಲಿಸಿ ತನುವ ಕೆಣಕುವ ಮಂದ ಮಾರುತ
ನಿನ್ನ ನೋಡೋ ಬಯಕೆ ಮೂಡಿ ಸುಮವು ಅರಳಿದೆ
ಸುಮ ಶೃಂಗ ಏರಿ ಪರಾಗ ಸ್ಪರ್ಷಿಸಿ ಭೃಂಗ ಹಾಡಿದೆ||

ಮರದ ಮೇಲೆ ಕುಳಿತು ಒರೆವ ಜೋಡಿ ಶುಕಗಳು
ಪ್ರೇಮ ಕಾವ್ಯ ಒರೆಯೆ ಹಾಡಿವೆ ಯುಗ್ಮ ಪಿಕಗಳು
ನವಿಲ ನಾಚಿಸೋ ನಿನ್ನ ನಾಟ್ಯ ಮನವು ಬಯಸಿರೆ
ನೋಡೆ ಮಾರ ಕೆಣಕುತಿಹನು ಒರೆಯಲೇನನು||

ಮೋಪಳಾ ಭಯೋತ್ಪಾದನೆ–ರಕ್ತಬೀಜಾಸುರನ ಸಂತತಿ: ಭಾಗ- ೪

ಅದು ದೇವರ ನಾಡೆಂದು ಕರೆಯಲ್ಪಡುತ್ತಿತ್ತುಆದರೆ ಅಂದಿನಿಂದ ದೆವ್ವಗಳ ನಾಡಾಗಿ ಬದಲಾಗುತ್ತಿದೆ
ಮೋಪಳಾ ಭಯೋತ್ಪಾದನೆರಕ್ತಬೀಜಾಸುರನ ಸಂತತಿ: ಭಾಗ:
 
ಮೋಪ್ಲಾಗಳ ಅತ್ಯಾಚಾರವೂ ಮಹಾ(ದುರಾ)ತ್ಮನ ಅನಾಚಾರವೂ:
 
               ಮೋಪ್ಲಾ ಬಂಡಾಯದ ಕುರಿತು ಆನಿಬೆಸೆಂಟ್, ಅಂಬೇಡ್ಕರ್, ಶಂಕರನ್ ನಾಯರ್ ಮುಂತಾದವರ ಭಾಷಣಗಳೂ, ಆರ್ಯಸಮಾಜ, ವೈಎಂಸಿಎ, ಸರ್ವೆಂಟ್ಸ್ ಆಫ್ ಇಂಡಿಯಾದ ವರದಿಗಳನ್ನು ಓದಿದರೆ ಎಂತಹವನಿಗಾದರೂ ರಕ್ತ ಕುದಿಯಲೇಬೇಕು.
>>ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಜಿ. ಕೆ ದೇವಧರ್, ಆರ್ಯ ಸಮಾಜದ ಋಷಿರಾಂ, ವೈಎಂಸಿಯ ಕೆಟಿ ಪಾಲ್ & ಎಚ್ ಎ ಪಾಪ್ಲೇ ಮೊದಲಾದವರು ಏರ್ಪಡಿಸಿದ ಸಂತ್ರಸ್ಥ ಸಹಾಯ ಶಿಬಿರಗಳಲ್ಲಿ ೨೬೦೦೦ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದರು. ಜಾಮೋರಿನ್ ದೊರೆಯ ಮನಕಾವು, ಕೊಟ್ಟಕ್ಕಲ್ ಅರಮನೆಗಳು, ಕೃಷ್ಣವರ್ಮ ರಾಜನ ಅರಮನೆಗಳಲ್ಲಿ ಸಾವಿರಾರು ಮಂದಿ ಆಸರೆ ಪಡೆದರು. ದಂಗೆ ನಡೆಯಲಿಲ್ಲವೆಂದಾದರೆ ಇಷ್ಟೊಂದು ಮಂದಿ ತಮ್ಮ ಮನೆಮಠ ತೊರೆದು ಹಲವು ತಿಂಗಳುಗಳ ಪರ್ಯಂತ  ಆಶ್ರಯ ಪಡೆದದ್ದು ಯಾಕೆ ಉಚಿತ ಊಟ ಸಿಗುತ್ತದೆಂದೇ?
             ನೀಲಂಬೂರು ರಾಣಿ ಅತ್ಯಾಚಾರಕ್ಕೊಳಗಾದ ೨ ಸಾವಿರ ಮಹಿಳೆಯರ ಪರವಾಗಿ ವೈಸ್ ರಾಯ್ ರೆಡಿಂಗನ ಪತ್ನಿಗೆ ಬರೆದ ಮನವಿ ಪತ್ರ ಕರುಣಾಸ್ಪದವಾಗಿದೆ.
ಪ್ರಮಾಣದ ಬರ್ಬರತೆ ಎಲ್ಲಿಯೂ ನಡೆದದ್ದಿಲ್ಲ. ನಮ್ಮ ಬಂಧುಗಳ ಶವಗಳಿಂದ ಇಲ್ಲಿಯ ಕೆರೆಗಳು, ಬಾವಿಗಳು ತುಂಬಿ ಹೋಗಿವೆ. ದುರ್ನಾತ ಹರಡಿದೆ. ನಮ್ಮ ಒಂದೇ ಒಂದು ಅಪರಾಧವೆಂದರೆ ನಮ್ಮ ಮಾತೃ ಧರ್ಮವನ್ನು ತ್ಯಜಿಸಲು ನಾವು ಒಪ್ಪದೇ ಇದ್ದುದು. ಗರ್ಭಿಣಿಯರನ್ನೂ ನಿರ್ದಯವಾಗಿ ಕೊಲ್ಲಲಾಗಿದೆ. ನಮ್ಮ ಹಸುಳೆ ಮಕ್ಕಳನ್ನು ನಮ್ಮೆದುರಿನಲ್ಲಿಯೇ ತುಂಡು ತುಂಡು ಮಾಡಿದ್ದಾರೆ. ಮಕ್ಕಳ ಅಳು ನಮ್ಮ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ. ಹಸುಗಳನ್ನು ಕೊಂದು ಅವುಗಳ ರಕ್ತಗಳನ್ನು ದೇವಾಲಯಗಳಲ್ಲಿ ಚೆಲ್ಲಾಡಿದ್ದಾರೆ. ತಲೆ ತಪ್ಪಿಸಿಕೊಂಡು ಅರಣ್ಯವಾಸಿಗಳಾಗಿರುವ ನಮಗೆ ಮೈ ಮುಚ್ಚುವಷ್ಟು ಬಟ್ಟೆಯೂ ಇಲ್ಲವಾಗಿದೆ. ಶ್ರೀಮಂತ ಮನೆತನದ ಮಹಿಳೆಯರನ್ನು ಬಲಾತ್ಕಾರವಾಗಿ ಮೋಪ್ಲಾ ಕೂಲಿಗಳಿಗೆ ಲಗ್ನ ಮಾಡಿಸಿದ್ದಾರೆ. ನಮ್ಮ ಅಕ್ಕ, ತಂಗಿಯರು, ಗೆಳತಿಯರನೇಕರು ದಾರುಣ ಅತ್ಯಾಚಾರಗಳಿಗೆ ಬಲಿಯಾಗಿದ್ದಾರೆ. ನಾವೀಗ ರಕ್ಷಣೆಗೆ ನಿಮ್ಮ ಸರಕಾರವನ್ನು ಮೊರೆ ಹೋಗದೇ ಬೇರೆ ದಾರಿಯೇ ಇಲ್ಲ.”
                 ಪೊಲೀಸರಿಗೆ ಬಲಿಯಾದ ಮೋಪ್ಲಾನೊಬ್ಬ ಸಾಯುವ ಸಂದರ್ಭದಲ್ಲಿ ಹೇಳಿದ ಮಾತು ಕೇಳಿ-“ನಾನು ನೆಮ್ಮದಿಯಿಂದ ಸಾಯುತ್ತಿದ್ದೇನೆ. ಹದಿನಾಲ್ಕು ಮಂದಿಯನ್ನು ನಾನು ಸಾಯಿಸಿದ್ದೇನೆ. ೫ ಮಹಿಳೆಯರನ್ನು ಅತ್ಯಾಚಾರ ಮಾಡಿ, ಹತ್ತು ಜನರ ಮತಾಂತರ ಮಾಡಿರುವ ನನಗೆ ಸತ್ತ ಮೇಲೆ ಮಾನಿನಿಯರಿಂದ ಸ್ವರ್ಗ ಸುಖ ದೊರೆಯುತ್ತದೆ.”
ಮಾಧವನ್ ನಾಯರ್ ಪ್ರತ್ಯಕ್ಷ ಕಂಡು ಕಳುಹಿಸಿದ ವರದಿ–“…A pregnant woman carrying 7 months was cut through the abdomen by a rebel and she was seen lying dead on the way with the dead child projecting out….Another baby of 6 months was snatched away from the breast of mother and cut into two pieces….
 
                ಅಬುಲ್ ಕಲಾಮ್ ಆಜಾದ್, ಹಕೀಂ ಅಜ್ಮಲ್ ಖಾನ್ ಮೊದಲಾದವರ ಉದ್ರೇಕಕಾರಿ ಭಾಷಣಗಳೇ ದಂಗೆಗೆ ಬೀಜಾರೋಪ ಮಾಡಿದವು ಎಂದು ಪಿ.ಸಿ. ಬಮ್ ಪರ್ಡ್ ವರದಿ ಮಾಡಿದರೆ, ಕಾಂಗ್ರೆಸ್ಸಿನ ಖಿಲಾಫತ್ ಪ್ರಚಾರವೇ ಇಡೀ ದುರಂತದ ಮೂಲವೆಂದು ರಾಲಿನ್ ಸನ್ ವರದಿ ಮಾಡಿದ್ದ. ‘ವಿಚಾರಣೆ'(!)ಗಾಗಿ ಕಾಂಗ್ರೆಸ್ ನೇಮಿಸಿದ್ದ ‘ತೈಯಬ್ಜಿ’ ಮಹಾಶಯ ಮಲಬಾರಿಗೆ ಕಾಲಿಡದೇ ಮದರಾಸಿನಲ್ಲೇ ಕುಳಿತು ತನ್ನ ವರದಿ ಬರೆದ! ಶೌಕತ್ ಆಲೀಯಂತು “ಸ್ವರಾಜ್ಯ ಆಂದೋಲನ ಹಿಂದೂ ರಾಜ್ಯಕ್ಕಾಗಿ ನಡೆದಿದೆ. ಹಾಗಾಗಿ ಮುಸಲ್ಮಾನರೆಲ್ಲಾ ಅದನ್ನು ತ್ಯಜಿಸಬೇಕು” ಎಂದು ಕರೆ ಕೊಟ್ಟ. ಇಷ್ಟೆಲ್ಲಾ ಆದರೂ ಗಾಂಧಿ ಹಿಂದೂಗಳಿಗೆ “ಅಹಿಂಸೆ ಪಾಲಿಸಿ” ಎಂದನೇ ಹೊರತು ಅನ್ಯಾಯದ ಬಗ್ಗೆ ತುಟಿಪಿಟಿಕ್ಕೆನ್ನಲಿಲ್ಲ. ಆತನದೇ ಹೇಳಿಕೆ ನೋಡಿ..
” Hindus will have to learn to die in the face of hewrest odds in order to convert musalman full into a respecting friend.”
 
            ಗಾಂಧಿಯ ಇನ್ನೊಂದು ಮಾನಗೆಟ್ಟ ಕಾರ್ಯವೆಂದರೆ ಮೋಪ್ಲಾಗಳಿಗಾಗಿ ಹಿಂದೂಗಳಿಂದಲೇ “ಪರಿಹಾರ ನಿಧಿ” ಸಂಗ್ರಹ ಮಾಡಿದ್ದು. ಮಾತ್ರವಲ್ಲ ಇಂಥವರು ೧೦ರೂ. ಕಳಿಸಿದ್ದಾರೆ, ಒಂದು ರೂಪಾಯಿ ಕಳುಹಿಸಿದ್ದಾರೆ…ಎಂದು ದಾಖಲೆ ಮಾಡುತ್ತಾ ಹೋಗಿದ್ದು! ಅಂದರೆ ಇಂದಿನ ಕಾಂಗ್ರೆಸ್ ಮನಸ್ಥಿತಿಯ ಮೂಲಪುರುಷ ಗಾಂಧಿ ಎಂಬುದು ಎಂತಹಾ ಅಜ್ಞಾನಿಗೂ ಅರ್ಥವಾಗುವ ವಿಷಯವಲ್ಲವೇ? ಆದರೂ ಅವ ಮಹಾತ್ಮ! ಎಂತಹಾ ದುರವಸ್ಥೆ ಈ ದೇಶದ್ದು?
 
ಹಿಂದೂಗಳ ರಕ್ಷಣೆಗೆ ಬಂದವರ್ಯಾರು?
>>ಮತಾಂತರಿತರನ್ನು ಮರಳಿ ಮಾತೃ ಧರ್ಮಕ್ಕೆ ಕರೆತಂದ ಆರ್ಯಸಮಾಜ.
>> ನಿಷ್ಪಕ್ಷಪಾತ ವರದಿ ಪ್ರಕಟಿಸಿ, ಸಂತ್ರಸ್ಥರಿಗೆ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದ ಸರ್ವೆಂಟ್ಸ ಆಫ್ ಇಂಡಿಯಾ, ವೈಎಂಸಿಎ ಮೊದಲಾದ ತಂಡಗಳು.
>>ಜನರನ್ನು ನೇರ ಸಂದರ್ಶಿಸಿ ಮಾಹಿತಿ ಸಂಗ್ರಹಿಸಿ, ಸಹಾಯ ಹಸ್ತ ಚಾಚಿದ ಮಹಾರಾಷ್ಟ್ರದ ಶ್ರೀ ಬಾಲಕೃಷ್ಣ ಮೂಂಜೆ.
>> ಇವತ್ತಿಗೂ ಇತಿಹಾಸದ ಈ ಘಟನೆ ಇತಿಹಾಸದ ಪುಟಗಳಿಂದ ಮರೆ ಮಾಡುವ ಬುದ್ದಿ ಜೀವಿಗಳ ಪ್ರಯತ್ನವನ್ನು ವಿಫಲವಾಗಿಸಿದ ಬ್ರಿಟಿಷರ ಸಚಿತ್ರ ವರದಿಗಳು, ಆಧಾರ ಸಹಿತ ಸತ್ಯ ಚಿತ್ರಣ ನೀಡಿದ ಅಮೃತಸರ-ಸಹರಾನ್ ಪುರದ ಪುಸ್ತಕ ಕರ್ತೃಗಳು ಹಾಗೂ ಕಾದಂಬರಿ ರೂಪದಲ್ಲಿ “ಮೋಪ್ಳಾ ದಂಗೆ” ಯನ್ನು ಪ್ರಕಟಿಸಿದ ಆರಾಧ್ಯ ದೈವ ಸ್ವಾತಂತ್ರ್ಯ ವೀರ ಸಾವರ್ಕರ್.
>>ಯಾರ ವಿರುದ್ಧ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೆವೋ ಅವರು: ಅಂದರೆ ಬ್ರಿಟಿಷ್ ಸರಕಾರ ಹಾಗೂ ಸೈನಿಕ & ಪೊಲೀಸ್ ಪಡೆಗಳು
 
                ದಂಗೆಗಳು ಶಾಂತವಾದ ಮೇಲೆ ಪುನರ್ವಸತಿ, ಮನೆ ದುರಸ್ತಿ, ಎತ್ತು, ದನ, ನೇಗಿಲು ಖರೀದಿ ಮೊದಲಾದ ಜೀವನಾಗತ್ಯಗಳಿಗೆ ಸಾಲ ಪಡೆದವರ ಸಂಖ್ಯೆಯೇ ೧೩,೫೦೦. ಆರ್ಯ ಸಮಾಜದ ಮುಖಾಂತರ ಮಾತೃಧರ್ಮಕ್ಕೆ ಮರಳಿದವರ ಸಂಖ್ಯೆಯೇ ೧೭೭೬.
 
                 ಗಾಂಧಿ ಪ್ರಣೀತ ಖಿಲಾಫತ್ ಕೂಸಾದ ಮೋಪ್ಲಾ ಬಂಡಾಯ ಕೇವಲ ಕೇರಳಕ್ಕೆ ಸೀಮಿತವಾಗುಳಿಯಲಿಲ್ಲ. ೧೯೨೪ರಲ್ಲಿ ಕೊಹಟ್, ೧೯೨೫ರಲ್ಲಿ ದೆಹಲಿ & ನಾಗಪುರ, ಭಾಗಲ್ಪುರ, ಲಖ್ನೋ, ಲಾಹೋರ್, ಗುಲ್ಬರ್ಗಾ, ೧೯೨೬ರಲ್ಲಿ ಕಲ್ಕತ್ತಾ, ಉತ್ತರ ಪ್ರದೇಶ, ಮುಂಬೈ, ೧೯೨೭ರಲ್ಲಿ ಕಲ್ಕತ್ತಾದಿಂದ ಲಾಹೋರ್ ಮಧ್ಯದ ವಿವಿಧ ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ಮುಸ್ಲಿಮ್ ದೌರ್ಜನ್ಯ ನಡೆಯಿತು. ೧೯೩೦-೩೧ರಲ್ಲಿ ಬಂಗಾಳ, ವೆಲ್ಲೂರ್, ಜಬಲ್ಪುರ, ಷಿಕಾರ್ ಪುರ, ಮೊದಲಾದ ಕಡೆ ಜಿಹಾದ್ ನಡೆಯಿತು. ೧೯೨೨-೨೭ರ ೫ ವರ್ಷಗಳ ಅವಧಿಯಲ್ಲಿ ಬಂಗಾಳ ಪ್ರಾಂತವೊಂದರಲ್ಲೇ ೩೫ ಸಾವಿರ ಮಹಿಳೆಯರ ಅಪಹರಣ, ಮಾನಭಂಗಗಳಾದವು. ಅದರ ಮುಂದುವರಿದ ಭಾಗವೇ ಮೊನ್ನೆ ಮೊನ್ನೆ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂದೂಗಳ ಮನೆಗಳ ಅಗ್ನಿಗಾಹುತಿ ಹಾಗೂ ಲೂಟಿ!
 
                ಅಂದು ಕೇರಳದಲ್ಲಿ ಭಯಾನಕಗೊಂಡ ಜಿಹಾದ್ ಇಂದಿಗೂ ನಿಂತಿಲ್ಲ. ಅದು ಈಗ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ವೈಣಿಕ ಜಿಹಾದ್, ಬ್ಯಾಂಕ್ ಜಿಹಾದ್, ರಾಜಕೀಯ ಜಿಹಾದ್ ಮುಂತಾದ ಹಲವು ಸ್ವರೂಪಗಳೊಂದಿಗೆ ಹಿಂದೂ ಸಮಾಜವನ್ನು ಸುಡುತ್ತಾ ಬರುತ್ತಿದೆ. ಒಂದು ಕಾಲದಲ್ಲಿ ಹಿಂದೂಗಳಾಗಿದ್ದು ಮತಾಂತರಗೊಂಡವರೇ ಈಗ ಉಳಿದ ಹಿಂದೂಗಳನ್ನು ಮತಾಂತರಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಹಿಂದೂ ಸಮಾಜ ಜಾಗೃತವಾಗಬೇಕಾಗಿದೆ.
 
 
ಇಂದಿಗೂ ಕೆಲವು ಸಮುದಾಯಗಳಿಗೆ ಮಾತೃ ಧರ್ಮವನ್ನು ಮರಳಿ ಸೇರುವ ಇಚ್ಛೆಯಿದೆ. ಆದರೆ ಅವರಿಗೆ ದಾರಿ ಕಾಣುತ್ತಿಲ್ಲ. ಆರ್ಯ ಸಮಾಜ ಬಿಟ್ಟರೆ ಶುದ್ಧೀಕರಣ ಮಾಡುವ ಸಂಸ್ಥೆಗಳಾವುವೂ ಕಾಣುತ್ತಿಲ್ಲ. ನಮ್ಮ ಸಹೋದರರನ್ನು ನಾವು ಸ್ವಾಗತಿಸಬೇಕಾಗಿದೆ. ಸ್ವಾಗತಿಸುವ ಮನಸ್ಸು ಮಾಡಬೇಕಾಗಿದೆ.
 

 

ವಂದೇ ಮಾತರಂ

ಮೋಪಳಾ ಭಯೋತ್ಪಾದನೆ–ರಕ್ತಬೀಜಾಸುರನ ಸಂತತಿ: ಭಾಗ- ೩

ಅದು ದೇವರ ನಾಡೆಂದು ಕರೆಯಲ್ಪಡುತ್ತಿತ್ತುಆದರೆ ಅಂದಿನಿಂದ ದೆವ್ವಗಳ ನಾಡಾಗಿ ಬದಲಾಗುತ್ತಿದೆ

ಮೋಪಳಾ ಭಯೋತ್ಪಾದನೆರಕ್ತಬೀಜಾಸುರನ ಸಂತತಿ: ಭಾಗ:
 
              ಕಲ್ಲಿಕೋಟೆಯ ಮುದುಮಣೆಯಿಲ್ಲಂ ಎಂಬೆಡೆಯ ದೇವಾಲಯದ ಗರ್ಭಗೃಹದಲ್ಲಿ ಬಂಡುಕೋರ ನಾಯಕನೊಬ್ಬ ಕುಳಿತು ದರ್ಬಾರ್ ನಡೆಸುತ್ತಿದ್ದ! ಸ್ಥಳೀಯರನ್ನು ಬಂಧಿಸಿ ಅವನ ಮುಂದೆ ಸಾಲಾಗಿ ಕರೆ ತರಲಾಗುತ್ತಿತ್ತು. ಅಲ್ಲಿ ಇಸ್ಲಾಮಿಗೆ ಪರಿವರ್ತಿತರಾಗಲು ಒಪ್ಪದವರನ್ನು ತಲೆ ಛೇದಿಸಿ ಪಕ್ಕದ ಬಾವಿಯೊಳಗೆ ಎಸೆಯಲಾಗುತ್ತಿತ್ತು. ಮಲಪ್ಪುರಂ ಉತ್ತರ ಭಾಗದಲ್ಲಿ ಇದ್ದ ತೂವೂರ್ ಎಂಬ ಬಾವಿಗೆ ಮೋಪ್ಲಾಗಳು ೨೭ ಮಂದಿ ಸ್ಥಳೀಯರ ತಲೆಗಳನ್ನು ಗರಗಸದಿಂದ ಕತ್ತರಿಸಿ ಎಸೆದರು.
 
              ಸ್ತ್ರೀಯರನ್ನು ಹಿಡಿದು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡುತ್ತಿದ್ದರು. ನಂತರ ಎಲ್ಲರ ಎದುರೇ ಅತ್ಯಾಚಾರ. ಗರ್ಭಿಣಿಯರ ಗರ್ಭ ಸೀಳಿ ಮಗುವನ್ನು ಕತ್ತರಿಸಿ ಎಸೆಯುತ್ತಿದ್ದರು. ಗರ್ಭಿಣಿ, ಹಸುಳೆ, ವೃದ್ಧೆ ಎನ್ನದೇ ಎಲ್ಲರನ್ನು ಮಾನಭಂಗಗೊಳಿಸುತ್ತಿದ್ದರು.
 
               ಕಲ್ಲಿಕೋಟೆಯಲ್ಲಿ ಜಾಮೋರಿನ್ ದೊರೆಯ ನೇತೃತ್ವದಲ್ಲಿ ನಡೆದ ಸಮಾವೇಶ ಈ ಎಲ್ಲಾ ಕೃತ್ಯಗಳನ್ನು ವಿವರವಾಗಿ ದಾಖಲೆ ಮಾಡಿತು. ಕೇರಳ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ಕೆ.ಪಿ. ಕೇಶವ ಮೆನನ್, ೧೯೨೧ರ ಸೆಪ್ಟೆಂಬರ್ ೭ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು ಬರೆದ ಪತ್ರ,…ಹೀಗೆ ಹತ್ತು ಹಲವು ವರದಿಗಳು ಮೋಪ್ಲಾಗಳ ಕೃತ್ಯಗಳನ್ನು ವರದಿ ಮಾಡಿದವು. ಆದಾಗ್ಯೂ ಗಾಂಧಿ ಪ್ರಣೀತ ಕಾಂಗ್ರೆಸ್ ಖಿಲಾಫತಿಗೆ ತನ್ನ ಬೆಂಬಲವನ್ನು ಹಿಂದೆ ತೆಗೆಯಲೇ ಇಲ್ಲ. ಈ ಸಂದರ್ಭದಲ್ಲಿ ಬ್ರಿಟಿಷ್ ರಕ್ಷಣಾ ಪಡೆಗಳು ಕಣಕ್ಕಿಳಿಯದಿದ್ದರೆ ಅದಾಗಲೇ ಕೇರಳ ಪಾಕಿಸ್ತಾನವಾಗಿ ಪರಿವರ್ತಿತವಾಗುತ್ತಿತ್ತು.
ಮೋಪ್ಲಾಗಳನ್ನು ಸಮರ್ಥಿಸಿದ ಗಾಂಧಿ:
 
              ಇಡೀ ದೇಶ ಮೋಪ್ಲಾ ಅತ್ಯಾಚಾರಕ್ಕೆ ಆತಂಕಗೊಂಡಿದ್ದರೆ, ಗಾಂಧಿ ಅದಾವುವೂ ತನಗೆ ತಿಳಿಯದೆಂದ. ಆಗ್ರಹಿಸಿ ಪ್ರಶ್ಣಿಸಿದಾಗ ” ಮೋಪ್ಲಾಗಳು ತಮ್ಮ ಧಾರ್ಮಿಕಾದೇಶದಂತೆ ವರ್ತಿಸಿದ್ದಾರೆ” ಎಂದು ಅತ್ಯಾಚಾರಿಗಳನ್ನೇ ಸಮರ್ಥಿಸಿದ. ಆತನದೇ ಅಣಿಮುತ್ತುಗಳನ್ನು ಕೇಳಿ…
 “The brave and god fearing moplahs are fighting for the religion as understood by them by a method they feel their religion enjoins them to adopt”
 
“May be that all the sufferings of the hindus are the rewards of the in human sins they have committed for years.”
 
ಗಾಂಧಿ “ವ್ಯಾಪಕ ಮತಾಂತರ ನಡೆದಿಲ್ಲ. ಕೇವಲ ಒಂದೇ ಒಂದು ಪ್ರಕರಣ ನಡೆದಿದೆ. ” ಎಂದು “ಯಂಗ್ ಇಂಡಿಯಾ” ದಲ್ಲಿ ಬರೆದ.
“Dr. mahamud tells me that have been grossly exaggerated…The one case that was reported to him was …non proven” ಗಾಂಧಿಯ ಈ ಹೇಳಿಕೆ ಕಾಂಗ್ರೆಸ್ ನಾಯಕರನ್ನೇ ದಿಗ್ಭ್ರಮೆಗೊಳಿಸಿತು. ದೌರ್ಜನ್ಯಗಳ ವರದಿಗಳೆಲ್ಲ ಉತ್ಪ್ರೇಕ್ಷಿತ ಎಂದು ಅದನ್ನು ತಳ್ಳಿ ಹಾಕುವ, ಸಕಲ ಪ್ರಯತ್ನವನ್ನೂ ಗಾಂಧಿ ಮಾಡಿದ.
                 “ಇಂಥಾ ಬಾಲಿಶ ಹೇಳಿಕೆಗಳನ್ನು ಕೊಡಬೇಡಿ” ಎಂದು ಗಾಂಧಿಗೆ ಹೇಳಿದ ತಪ್ಪಿಗೆ ಕೆ.ಪಿ. ಕೇಶವ ಮೆನನರ(ಕಲ್ಲಿ ಕೋಟೆಯ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ) ಮನೆಯ ಮೇಲೇ ಕಾಂಗ್ರೆಸ್ಸಿಗರು ಕಲ್ಲು ತೂರಿದರು. ಕಾಂಗ್ರೆಸ್ ತನಗೂ ಮೋಪ್ಲಾ ಗಲಭೆಗೂ ಸಂಬಂಧವಿಲ್ಲವೆಂದೂ, ಉತ್ಪ್ರೇಕ್ಷಿತ ವರದಿಗಳಿಂದ ವಿಚಲಿತರಾಗಿ ಮೋಪ್ಲಾಗಳು ಹಿಂಸಾಚಾರಕ್ಕಿಳಿದರೆಂದೂ ನಿರ್ಣಯ ಮಾಡಿತು. ಮದರಾಸ್ ಸರಕಾರದ ಅಧಿಕೃತ ದಾಖಲೆಯಲ್ಲಿ ಹಲವು ಸಾವಿರ ಮತಾಂತರ ಪ್ರಕರಣಗಳ ಅಧಿಕೃತ ವರದಿಗಳು ಇದ್ದಾಗ್ಯೂ ಗಾಂಧಿ ಈ ವರೆಗೆ ಅಂತಹ ಕೇವಲ ೩ ಪ್ರಕರಣಗಳು ನಡೆದಿವೆ ಎಂದ(೧೯೨೨ ಜನವರಿ). ಕಾಂಗ್ರೆಸ್ ಮಗುಮ್ಮಾಗಿ ಬೆಂಬಲಿಸಿತು.
                 ಸರ್ವೆಂಟ್ಸ್ ಆಫ್ ಸೊಸೈಟಿಯ ವರದಿಯಂತೆ ಮೋಪ್ಲಾಗಳಿಂದ ೧೦೦೦ ಹಿಂದೂಗಳ ಕಗ್ಗೊಲೆ, ೨೦೦೦೦ ಬಲವಂತದ ಮತಾಂತರಗಳು, ಹಲವು ಸಾವಿರ ಮಹಿಳೆಯರ ಅತ್ಯಾಚಾರ, ಜನರಿಂದ ೩ ಕೋಟಿಗೂ ಮಿಕ್ಕಿದ ಹಣದ ಲೂಟಿ ಆಗಿತ್ತು. ಎಡಬಿಡಂಗಿ ಕಮ್ಯೂನಿಷ್ಟರು “ಮೋಪ್ಲಾಗಳು ೧೧೦೦ ದೇವಾಲಯಗಳ ಪೈಕಿ ೧೦೦ ದೇವಾಲಯಗಳನ್ನು ಮಾತ್ರ ಧ್ವಂಸ ಮಾಡಿದರು. ೫೦೦ ಮಂದಿ ಮಾತ್ರ ಕೊಲೆಯಾದರು. ೨೫೦೦ ಮಂದಿ ಮಾತ್ರ ಮತಾಂತರಗೊಂಡರು” ಎಂಬ ತನ್ನ ಎಂದಿನ ಹಿಂದೂ ವಿರೋಧಿ ಮನಸ್ಥಿತಿಯ ವರದಿಗಳನ್ನೇ ತಯ್ಯಾರು ಮಾಡಿದರು.
             ಈ ದಂಗೆಗಳನ್ನು ತಹಬಂದಿಗೆ ತರಲು ಪೊಲೀಸ್ ಪಡೆಗಳಿಗೆ ಸಾಧ್ಯವಾಗದೇ ಸೈನಿಕ ತುಕಡಿಗಳನ್ನೇ ಕರೆಸಿಕೊಳ್ಳಲಾಯಿತು. ಈ ಹಂತದಲ್ಲಿ ಗೆರಿಲ್ಲಾ ಯುದ್ಧ ತಂತ್ರಕ್ಕೆ ಶರಣು ಹೋದ ಮೋಪ್ಲಾಗಳನ್ನು ನಿಯಂತ್ರಿಸಲು ಒಂದು ವಿಶೇಷ ಅನುಭವಿ ಪಡೆಯನ್ನೇ ತರಬೇತುಗೊಳಿಸಿ ನೇಮಿಸಲಾಯಿತು. ಹೀಗೆ ಏಳೆಂಟು ತಿಂಗಳುಗಳ ಪರ್ಯಂತ ಮೋಪ್ಲಾಗಳೊಂದಿಗೆ ಕಾದಾಡಿದ ಈ ಪಡೆ ದಂಗೆಯನ್ನು ನಿಯಂತ್ರಿಸಿತು.

ಮೋಪಳಾ ಭಯೋತ್ಪಾದನೆ–ರಕ್ತಬೀಜಾಸುರನ ಸಂತತಿ: ಭಾಗ- ೨

ಅದು ದೇವರ ನಾಡೆಂದು ಕರೆಯಲ್ಪಡುತ್ತಿತ್ತುಆದರೆ ಅಂದಿನಿಂದ ದೆವ್ವಗಳ ನಾಡಾಗಿ ಬದಲಾಗುತ್ತಿದೆ

 
ಮೋಪಳಾ ಭಯೋತ್ಪಾದನೆರಕ್ತಬೀಜಾಸುರನ ಸಂತತಿ: ಭಾಗ :
               ಜನರ ಮೇಲಿನ ಅತ್ಯಾಚಾರವನ್ನು ನಿವಾರಿಸಲು ಬಂದ ಪೊಲೀಸರನ್ನು ಕೊಚ್ಚಿ ಹಾಕುತ್ತಿದ್ದರು. ” ಇಸ್ಲಾಮಿಗೆ ಮತಾಂತರಗೊಳ್ಳಿ ಇಲ್ಲವೇ ಸಾಯಲು ಸಿದ್ಧರಾಗಿ” ಎನ್ನುತ್ತಾ ಬಲಾತ್ಕಾರದ ಮತಾಂತರ, ಮಹಿಳೆಯರ ಅತ್ಯಾಚಾರ, ಹಿಂದೂಗಳ ಚರ್ಮ ಸುಲಿಯುವುದು, ಆಸ್ತಿಪಾಸ್ತಿ ಲೂಟಿ, ಕೊಲೆ,ಹಗಲು ದರೋಡೆ, ಸರಕಾರೀ ಖಜಾನೆಗಳ ದರೋಡೆ ಎಗ್ಗಿಲ್ಲದೆ ನಡೆದವು. ಮರಗಳ ಛೇದನ, ಸೇತುವೆಗಳ ಧ್ವಂಸ ಈ ಎಲ್ಲಾ ತಂತ್ರಗಳನ್ನು ಖಿಲಾಫತಿಗರು ಬಳಸಿದರು. ದೇವಾಲಯಗಳ ಲೂಟಿ, ವಿಗ್ರಹ ಭಂಜನೆಗಳು ಅಗಾಧ ಪ್ರಮಾಣದಲ್ಲಿ ನಡೆದವು.
 
                  ದಂಗೆಕೋರರಿಗೆ ಅಹಿಂಸೆ ಭೋಧಿಸಹೊರಟ ಮಂಜೇರಿಯ ಕೆ. ಮಾಧವನ್ ನಾಯರ್, ಎರ್ನಾಡಿನ ಎಂ.ಪಿ. ನಾರಾಯಣ ಮೆನನ್ ಮೊದಲಾದವರ ಪ್ರಯತ್ನಗಳು ವಿಫಲಗೊಂಡವು. “ನಾವೇನು ಮಾಡುತ್ತಿದ್ದೇವೆಂದು ನಮಗೆ ಗೊತ್ತು. ನಿಮ್ಮ ಉಪದೇಶ ನಮಗೆ ಬೇಕಾಗಿಲ್ಲ” ಎಂದರು ಮೋಪ್ಲಾಗಳು. ಇಷ್ಟೆಲ್ಲಾ ನಡೆದರೂ ಗಾಂಧಿಯ ಹೇಳಿಕೆ ನೋಡಿ- ” I would gladly ask for the postponement of the swaraj activity if we could advance the interest of khilaphat”
 
                     1891ರಲ್ಲಿ ಎರ್ನಾಡ್, ವಳ್ಳುವನಾಡ್, ಪೊಣ್ಣನಿ ಈ ಮೂರು ತಾಲೂಕುಗಳಲ್ಲಿ ನೂರರಲ್ಲಿ ಎಪ್ಪತ್ತರಷ್ಟಿದ್ದ ಮಾಪಿಳ್ಳೆಗಳ ಸಂಖ್ಯೆ ಮೂರೇ ದಶಕಗಳಲ್ಲಿ ೮೫ ಪ್ರತಿಶತವನ್ನೂ ದಾಟಿತು. ಹಿಂದೂಗಳ ಸಂಖ್ಯೆ ೫೨೦೧೭ ಇದ್ದರೆ ಮಾಪ್ಪಿಳ್ಳೆಗಳ ಸಂಖ್ಯೆ ೧,೫೦,೫೩೨ ಆಗಿತ್ತು.  “ಶಸ್ತ್ರಾಸ್ತ್ರಗಳು, ಸರಂಜಾಮುಗಳು ಹಾಗೂ ಸೈನಿಕರನ್ನು ಹೊತ್ತ ಹಡಗುಗಳು ಭಾರತದತ್ತ ಹೊರಟಿವೆ. ಅವು ತಲುಪಿದೊದನೆ ಹಿಂದೂಗಳ ಮಾರಣ ಹೋಮ ಆದಂತೆ” ಎಂದು ಹೆದರಿಸಿ ಮತಾಂತರವನ್ನು ಮತ್ತಷ್ಟು ಹೆಚ್ಚಿಸಲಾಯಿತು. ” ಇನ್ನು ಮುಂದೆ ನೀವು ಮಾಪಿಳ್ಳೆಗಳ ಹೆಸರುಗಳನ್ನು ಹೊಂದಬೇಕಾಗುತ್ತೆ” ಎಂದು ನಾಯರ್ ಮಹಿಳೆಯರಿಗೆ ಹೇಳಿ ಆ ಹೊಸ ಹೆಸರುಗಳನ್ನು ಲೆಡ್ಜರುಗಳಲ್ಲಿ ಬರೆದಿಡಲಾಗುತ್ತಿತ್ತು.
 
                 ಹಿಂದೂಗಳ ಮೇಲೆ ಆಕ್ರಮಣ ನಡೆಸುವ ಪ್ರವೃತ್ತಿ ಕೇರಳದ ಮುಸ್ಲಿಮರಲ್ಲಿ ದೀರ್ಘಕಾಲ ಮನೆ ಮಾಡಿದ್ದುದರಿಂದ ಗಾಂಧಿ ಹೊತ್ತಿಸಿದ ಕಿಡಿ ಉರಿದೆದ್ದು ನಂದಿಸದ ಜ್ವಾಲೆಯಾಗಿ ಅಸಂಘಟಿತ ಹಿಂದೂಗಳ ಮಾರಣ ಹೋಮ ಪ್ರಾರಂಭವಾಯಿತು. ಶೌರ್ಯಕ್ಕೆ ಹೆಸರಾಗಿದ್ದ ನಾಯರ್ ಸಮುದಾಯವನ್ನು ನಿಶ್ಯಸ್ತ್ರಗೊಳಿಸಿದ್ದ ಬ್ರಿಟಿಷರ ಕ್ರಮ ಮಾಪ್ಪಿಳ್ಳೆಗಳಿಗೆ ಲಾಭದಾಯಕವಾಯಿತು.
 
ಅದೇ ಸಮಯದಲ್ಲಿ ಕರ್ಣಾವತಿ(ಈಗ ಅಹ್ಮದಾಬಾದ್ ಆಗಿ ಮತಾಂತರಗೊಂಡಿದೆ)ಯಲ್ಲಿ ನಡೆದ ಮುಸ್ಲಿಮ್ ಲೀಗ್ ಅಧಿವೇಶನದ ಅಧ್ಯಕ್ಷ ಭಾಷಣದಲ್ಲಿ ಹಸರತ್ ಮೊಹಾನಿ ಮೋಪ್ಳಾ ದಂಗೆಯನ್ನು ಸಮರ್ಥಿಸುತ್ತಾ “ಹಿಂದೂಗಳು ಜಿಹಾದನ್ನು ಸ್ವೀಕರಿಸಿಲ್ಲ ಎಂದ ಮೇಲೆ ಅವರು ನಮ್ಮ ಶತ್ರುಗಳೇ. ಹಾಗಾಗಿ ಅವರ ಮೇಲಿನ ಹಲ್ಲೆ ಹಾಗೂ ಅತ್ಯಾಚಾರ ದೋಷವೆನಿಸುವುದಿಲ್ಲ” ಎಂದು ಬೊಬ್ಬಿರಿದ. ವಿಪರ್ಯಾಸವೆಂದರೆ ಖಿಲಾಫತಿಗೆ ಹೆಗಲು ಕೊಟ್ಟ ಮಹಾತ್ಮ(!) ಅದೇ ಸಭೆಯಲ್ಲಿದ್ದರೂ ತುಟಿ ಬಿಚ್ಚಲಿಲ್ಲ. ವ್ಯತಿರಿಕ್ತವಾಗಿ ಆನಿಬೆಸೆಂಟ್ ಮೋಪ್ಳಾ ದಂಗೆಯನ್ನು ಖಂಡಿಸುತ್ತಾ “ಮುಸ್ಲಿಮರ ಸ್ವಭಾವಗತ ಹಿಂಸಾ ಪ್ರವೃತ್ತಿಯೇ ಈ ದೌರ್ಜನ್ಯಗಳಿಗೆ ಕಾರಣ” ಎಂದು ಹಿಂದೂಗಳನ್ನು ಎಚ್ಚರಿಸಿದರು.
ಕೊಲೆಲೂಟಿಅತ್ಯಾಚಾರ:
 
               ಪೊಣ್ಣನಿಯ ಸರಕಾರೀ ಕಾಲೇಜಿನ ಆಸುಪಾಸಿನಲ್ಲಿಯೇ ಖಿಲಾಫತಿಗರು ಲೂಟಿ ದಾಂಧಲೆ ನಡೆಸಿದರು. ಇಲ್ಲಿ ೬೭ ಪೊಲೀಸರು ಕೊಲೆಯಾದರು, ೧೫೫ ಮಂದಿ ಮಾರಣಾಂತಿಕವಾಗಿ ಗಾಯಗೊಂಡರು. ಮಂಜೇರಿ, ತಿರುರಂಗಾಡಿಗಳಲ್ಲಿ ಅಂಗಡಿಗಳನ್ನು ಸುಟ್ಟು ಹಾಕಿದರು. ಉಗ್ರ ಮತಪ್ರವರ್ತಕರಾಗಿದ್ದ ಮುಸ್ಲಿಂ ಭಯೋತ್ಪಾದಕರಿಗಂತೂ ಖಿಲಾಫತ್ ಆಂದೋಲನ ಸುಸಂಧಿಯಾಗಿ ಒದಗಿ ಬಂತು. ಇಂತಹವರೆಲ್ಲರೂ ಏಕಾಏಕಿ ಗಾಂಧಿ ಅನುಯಾಯಿಗಳಾಗಿ ತಮ್ಮ ಮತಾಂತರ, ಲೂಟಿ, ಮಾನಭಂಗವನ್ನು ಮತ್ತಷ್ಟು ನಿರ್ಭಿಡೆಯಿಂದ ಮಾಡತೊಡಗಿದರು.
                 ಅಲೀ ಮುಸಲಿಯಾರ್ ಎಂಬ ಮೌಲ್ವಿ ಏರ್ನಾಡ್, ತಿರುರಂಗಾಡಿಗಳಲ್ಲಿ ತಾನೇ ರಾಜನೆಂದು ಘೋಷಿಸಿಕೊಂಡು ಕಪ್ಪ ವಸೂಲು ಮಾಡತೊಡಗಿದ. ಉಗ್ರ ಮತಾಂತರ ಮಾಡುತ್ತಿದ್ದ ಈ ಕ್ರೂರ ಅತ್ಯಾಚಾರಿಯನ್ನು ಹಾಗೂ ಅವನ ಸಂಗಡಿಗರನ್ನು ಹಿಡಿದ ಪೊಲೀಸರು ಅವನಿಗೆ ಮರಣದಂಡನೆಯಾಗುವಂತೆ ಮಾಡಿ ಹಿಂದೂಗಳ ತುಸು ನೆಮ್ಮದಿಗೆ ಕಾರಣವಾದರು. ನೀಲಂಬೂರಿನಲ್ಲಿ ವಿ. ಕೆ. ಹಾಜಿ ಎಂಬಾತನ ಕ್ರೌರ್ಯ ಹೇಗಿತ್ತೆಂದರೆ ಅವನ ಹೆಸರು ಹೇಳಲೂ ಜನ ಹೆದರುತ್ತಿದ್ದರು. ಅಪಾರ ಶಸ್ತ್ರ ಸಂಗ್ರಹ ಮಾಡಿದ್ದ ಅವನು ತನ್ನ ಕೊಲೆ, ಲೂಟಿ, ಮಾನಭಂಗಗಳ ಸುದ್ದಿ ಮಂಜೇರಿ, ನೀಲಂಬೂರುಗಳಿಂದಾಚೆಗೆ ಹೋಗದಂತೆ ಎಚ್ಚರ ವಹಿಸಿದ್ದ. ಅವನನ್ನು ಬಂಧಿಸಿ ಮರಣದಂಡನೆ ವಿಧಿಸಲು ವಿಶೇಷ ಪೊಲೀಸ್ ಪಡೆಯನ್ನೇ ರಚಿಸ ಬೇಕಾಯಿತು. ಪಂದಲೂರಿನ ಹೆಡ್ ಕಾನ್ ಸ್ಟೇಬಲ್ ಹೈಡ್ರಾಸನನ್ನು ಅವನ ಪತ್ನಿ, ಮಕ್ಕಳ ಎದುರೇ ಕೊಚ್ಚಿ ಹಾಕಿದರು.
– ಮುಂದುವರಿಯುವುದು

ಮೋಪಳಾ ಭಯೋತ್ಪಾದನೆ–ರಕ್ತಬೀಜಾಸುರನ ಸಂತತಿ: ಭಾಗ-೧

   ಅದು ದೇವರ ನಾಡೆಂದು ಕರೆಯಲ್ಪಡುತ್ತಿತ್ತು…ಆದರೆ ಅಂದಿನಿಂದ ದೆವ್ವಗಳ ನಾಡಾಗಿ ಬದಲಾಗುತ್ತಿದೆ…
ಮೋಪಳಾ ಭಯೋತ್ಪಾದನೆರಕ್ತಬೀಜಾಸುರನ ಸಂತತಿ: ಭಾಗ:
 
                      ಬಾಗ್ದಾದಿನಲ್ಲಿ ಖಲೀಫನ ಸುಲ್ತಾನಿಕೆ ಪುನಃ ನೆಲೆಗೊಳಿಸಬೇಕೆಂಬ ಉದ್ದೇಶದಿಂದ ಶುರುವಾದದ್ದೇ ಖಿಲಾಫತ್ ಆಂದೋಲನ! ಮೊದಲ ಮಹಾಯುದ್ಧ ಮುಗಿದ ತರುವಾಯ ಬ್ರಿಟಿಷ್ ಸಾಮ್ರಾಜ್ಯ ನಿಸ್ಸತ್ವಗೊಂಡುದುದರಿಂದ ತುರ್ಕಿಯ ಪ್ರಭುತ್ವವನ್ನು ಮರುಸ್ಥಾಪಿಸಬಹುದೆಂಬ ಭ್ರಮೆಯಲ್ಲಿ ಶುರುವಾದ ಈ ಖಿಲಾಫತ್ ಆಂದೋಲನದ ಮುಖ್ಯ ಉದ್ದೇಶಗಳು ಎರಡು…
೧. ಖಲೀಫನ ಸಾಮ್ರಾಜ್ಯದ ಮರುಸ್ಥಾಪನೆ
೨. ಆಟೋಮನ್ ಸಾಮ್ರಾಜ್ಯದ ಅಖಂಡತೆಯನ್ನು ಸಾಧಿಸುವುದು.
 
                   ಜಗತ್ತಿನೆಲ್ಲಾ ರಾಷ್ಟ್ರಗಳು ಪ್ರಜಾಪ್ರಭುತ್ವವನ್ನರಸಿ ಹೋಗುತ್ತಿದ್ದಾಗ ಈ ಖಿಲಾಫತಿಗರು ರಾಜಾಧಿಕಾರವನ್ನು ಬಯಸಿದ್ದು ಹಾಗೂ ಅದಕ್ಕೆ ಮಹಾತ್ಮ ಎಂದು ಕರೆಸಿಕೊಂಡ ವ್ಯಕ್ತಿ ಅಸಹಕಾರ ಚಳುವಳಿಯ ಹೆಸರಿನಲ್ಲಿ ಹೆಗಲುಕೊಟ್ಟಿದ್ದು ತನ್ಮೂಲಕ ಭಾರತದ ಹೆಸರಿಗೆ ಕೆಸರೆರಚಿದ್ದು ಈಗ ಸರ್ವವಿದಿತ. ೧೯೧೨ರಲ್ಲಿ ಬಾಲ್ಕನ್ ರಾಜ್ಯಗಳಿಂದ ಟರ್ಕಿ ಸೋತು ಸುಣ್ಣವಾದ ಮೇಲೆ ಯೂರೋಪಿನ ಜನ ಇಸ್ಲಾಂನ್ನು ತಿರಸ್ಕರಿಸಲಾರಂಭಿಸಿದ್ದರು. ಆದರೆ ಭಾರತದೊಳಗಿನ ಮತಭ್ರಾಂತರನ್ನು ಹುಚ್ಚೆಬ್ಬಿಸಲು ನಾಮಾವಶೇಷವಾಗಿದ್ದ ಖಲೀಫನ ಪ್ರಭುತ್ವವನ್ನು ಪುನರುಜ್ಜೀವಿಸುವ ಈ ಪ್ರಯತ್ನ ಸಾಕಾಯಿತು. ಆದರೆ ಮಹಾತ್ಮ ಎಂದು ತನ್ನ ಸ್ತುತಿಪಾಠಕರಿಂದ ಕರೆಸಿಕೊಂಡ ಗಾಂಧಿಯ ಈ ಖಿಲಾಫತ್ ಪರ ಆವೇಶಕ್ಕೆ ಬೆಲೆ ತೆತ್ತವರು ಮಲಬಾರಿನ ಹಿಂದೂಗಳು.
 
                     ಖಿಲಾಫತ್ ಚಳವಳಿ ಘೋಷಿತವಾದೊಡನೆ ಗಾಂಧಿಯ ಸೂಚನೆಯಂತೆ ದೇಶಾದಾದ್ಯಂತ ಖಿಲಾಫತ್ ದಿನವನ್ನು ಕಾಂಗ್ರೆಸ್ ಘಟಕಗಳ ಮೂಲಕ ಆಚರಿಸಲಾಯಿತು. ಅಲಹಾಬಾದ್, ಕರಾಚಿಗಳಲ್ಲಿ ಖಿಲಾಫತ್ ಸಮ್ಮೇಳನಗಳೂ ನಡೆದವು. ಗಾಂಧಿ, ಮಹಮದ್ ಆಲಿ ಜೊತೆ ಸೇರಿ ಖಿಲಾಫತ್ ಪರ ಯಾತ್ರೆಯನ್ನೂ ನಡೆಸಿದ. ಮಾತ್ರವಲ್ಲ ಖಿಲಾಫತಿಗಾಗಿ ಹಣಸಂಗ್ರಹ ಅಭಿಯಾನ ಕೂಡಾ ಆರಂಭವಾಯಿತು. ಕೆಲವು ಕಡೆ ಅದ್ದೂರಿ ಪ್ರಚಾರ ನಡೆಸಿದಾಗ್ಯೂ ಜನ ಸೇರದೇ ಇದ್ದುದರಿಂದ ಮಸೀದಿಗಳಲ್ಲಿಯೇ ಸಭೆಯ ಶಾಸ್ತ್ರ ಮುಗಿಸಿದರು. ಕಾಂಗ್ರೆಸ್ಸಿನ ಅಧಿಕೃತ ಅನುಮೋದನೆ ಪಡೆಯದೇ ಗಾಂಧಿ ಖಿಲಾಫತ್ ಆಂದೋಲನ ಘೋಷಿಸಿಯೇ ಬಿಟ್ಟಿದ್ದ. ಆದರೆ ಖಿಲಾಫತ್ ಪರ ನಿರ್ಣಯಕ್ಕೆ ಮತ ಹಾಕಲು ಕಲ್ಕತ್ತಾದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ(೮-೯-೧೯೨೦) ಕಾಂಗ್ರೆಸ್ ದಳಗಳು ಟ್ಯಾಕ್ಸಿ ಡ್ರೈವರ್ ಗಳನ್ನೂ ಹಣಕೊಟ್ಟು ಕರೆತಂದಿದ್ದರು! ಬಹುತೇಕರಿಗೆ ಖಿಲಾಫತ್ ಆಂದೋಲನ ಒಪ್ಪಿತವಿಲ್ಲದಿದ್ದರೂ ಗಾಂಧಿಯನ್ನು ವಿರೋಧಿಸುವವರೇ ಇರಲಿಲ್ಲ! ಇದಕ್ಕೆ ಪ್ರತಿಯಾಗಿ ಖಿಲಾಫತ್ ಖಂಡಿಸಲು ಒಟ್ಟಾಪಳಂನಲ್ಲಿ ನಡೆದ(೨೩-೦೪-೧೯೨೧) ಆನಿಬೆಸೆಂಟ್ ಉಪನ್ಯಾಸದಲ್ಲಿ ಜನ ಕಿಕ್ಕಿರಿದು ಸೇರಿದ್ದರು.
 
” ಗಾಂಧಿಯವರು ಕೈಗೊಂಡ ಖಿಲಾಫತ್ ಆಂದೋಲನ ಮತೀಯ ಆಂದೋಲನವಾಗಲಿದೆ. ಇದರಿಂದ ದೇಶಕ್ಕೆ ಭಾರೀ ಅಪಾಯವಿದೆ” ಎಂದು ಡಾ|| ಹೆಡಗೆವಾರರು ಎಚ್ಚರಿಸಿದ್ದರು.
 
ಪರಿಣಾಮ ಏನು?
>> ಪುಕ್ಕಟ್ಟೂರು ಭಾಗದ ಎಲ್ಲಾ ಹಿಂದೂಗಳನ್ನು ೧೯೨೧ರ ಆಗಸ್ಟ್ ನಲ್ಲಿ ಮತಾಂತರಿಸಲಾಯಿತು.
>> ಕಾರಾಗೃಹದ ಅಪರಾಧಿಗಳನ್ನು ಮುಕ್ತಗೊಳಿಸಿದ ಖಿಲಾಫತಿಗರು ಅವರನ್ನು ಕೊಲೆ ಲೂಟಿಗಳಿಗೆ ಬಳಸಿಕೊಂಡರು.
>> ಹಿಂದೆ ಹಿರಿಯರೆಂದು ತಾವೇ ಗೌರವಿಸಿದ್ದ ಕೋಮು ಮೆನನ್ ಪರಿವಾರವನ್ನೂ ಲೂಟಿಗೈದು ಮತಾಂತರಿಸಿದರು.(ಮುಂದೆ ಕೋಮು ಮೆನನ್ ಪರಿವಾರ ಮಾತೃಧರ್ಮಕ್ಕೆ ಮರಳಿತು)
 
     ಕೇರಳದೆಲ್ಲೆಡೆ ಕಾಂಗ್ರೆಸ್ ಕಾರ್ಯಾಲಯಗಳ ಮೇಲೆ ಖಿಲಾಫತ್ ಬಾವುಟಗಳು ಕಾಂಗ್ರೆಸ್ ಬಾವುಟಗಳ ಜೊತೆ ರಾರಾಜಿಸತೊಡಗಿದವು. ಕಾಂಗ್ರೆಸ್ ಕಾರ್ಯಕರ್ತರು ಖಿಲಾಫತ್ ವಾಲಂಟಿಯರ್ ಗಳಾದರು. ಯಾವ ಕಡೆ ನೋಡಿದರೂ ಖಿಲಾಫತ್ ಧ್ವಜಗಳ ವಿಜೃಂಭಣೆ, ಖಿಲಾಫತ್ ಪರ ಘೋಷಣೆ, ಖಿಲಾಫತ್ ರಾಜ್ಯಕ್ಕೆ ಜೈಕಾರ ಹಾಗೂ ಟರ್ಕಿಷ್ ಟೋಪಿ ಧರಿಸಿದ ಕಾಂಗ್ರೆಸ್ಸಿಗರು….ಹೀಗೆ ಕಾಂಗ್ರೆಸ್ ಪೂರ್ತಿ ಬಣ್ಣಗೆಟ್ಟಿತ್ತು! ಅದರಲ್ಲೂ ಗಾಂಧಿ ಬೆಂಬಲದಿಂದ ಉತ್ತೇಜಿತರಾದ ಮಾಪಿಳ್ಳೆಗಳು ಕತ್ತಿ, ಗುರಾಣಿ ಮುಂತಾದ ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ಮದೋನ್ಮತ್ತರಂತೆ ವರ್ತಿಸಲಾರಂಭಿಸಿದ್ದರು.