ಅವ ನಮ್ಮವ ಅಂತ ಎದೆ ತಟ್ಟಿ ಹೇಳಿಕೊಳ್ಳುತ್ತೇನೆ!

ಅವ ನಮ್ಮವ ಅಂತ ಎದೆ ತಟ್ಟಿ ಹೇಳಿಕೊಳ್ಳುತ್ತೇನೆ!
ಶ್ರೀಯುತ ನಾಥೂರಾಮ ಗೋಡ್ಸೆ!
ಸಾವಿರಾರು ಮುಸ್ಲಿಂ ಗೂಂಡಾಗಳು ಲಕ್ಷಾಂತರ ಮಾನಿನಿಯರ ಮಾನಹರಣ ಮಾಡುತ್ತಿದ್ದಾಗ ‘ಅದು ಅವರ ಲೈಂಗಿಕ ತೃಷೆ ತೀರಿಸಿಕೊಳ್ಳಲು’ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಾ, ಬಂಗಾಳದ ಮುಸ್ಲಿಂ ನವಾಬ ಸುರ್ಹಾವರ್ದಿಯ ತೊಡೆ ನೇವರಿಸುತ್ತ ಕೂತಿದ್ದ ‘ಸ್ವಯಂಘೋಷಿತ’ ನಾಯಕನನ್ನು ಸಂಹರಿಸಿದ್ದು ತಪ್ಪೇ?
ಅದು ಕೊಲೆಯಲ್ಲ ವಧೆ!
ತನ್ನ ಮಕ್ಕಳನ್ನು ಸಲಹಿದ ಸ್ವಾಮಿ ಶೃಧ್ಧಾನಂದರನ್ನು ಕೊಂದವ ಮುಸ್ಲಿಮ ಎನ್ನುವ ಕಾರಣಕ್ಕೆ ಸೋದರ ಎಂದು ಕರೆದು ಸಾರ್ವಜನಿಕವಾಗಿ ಅಪ್ಪಿಕೊಂಡ ರಣಹೇಡಿಯನ್ನು ಮತ್ತೇನು ಮಾಡಬೇಕಿತ್ತು?
ಅನುಯಾಯಿಗಳಿಗೆ ಸರಳತೆ ಭೋದಿಸಿ ತಾನು ಆ ಕಾಲಕ್ಕೆ ದುಬಾರಿಯಾಗಿದ್ದ ಶೇಂಗಾ, ಆಡಿನ ಹಾಲನ್ನು ಬಯಸುತ್ತಿದ್ದ ಗೋಮುಖವ್ಯಾಘ್ರನಿಗೆ ಅದೇ ಸರಿಯಾದ ಆದರೆ ತಡವಾದ ಶಿಕ್ಷೆಯಲ್ಲವೆ?
ಸಾಧ್ವಿ ಹೆಂಡತಿ ಇದ್ದಾಗ ತನ್ನ ೫೧ರ ಪ್ರಾಯದಲ್ಲಿ ಟಾಗೋರರ ಸೋದರ ಸೊಸೆ ಸ್ವರೂಪರಾಣಿಯನ್ನು ಬಯಸಿ ಹೆಂಡತಿಗೆ ವಿಚ್ಛೇದನ ನೀಡಲು ಸಿದ್ಧವಾಗಿದ್ದ ಪಾಖಂಡಿಗೇನು ಪೂಜೆ ಮಾಡಬೇಕಿತ್ತೆ?
ಸುಭಾಷರನ್ನು ಧಿಕ್ಕರಿಸಿದ್ದ, ಸಾವರ್ಕರರ ಬಿಡುಗಡೆಗೆ ಸಹಿ ಹಾಕಲು ನಿರಾಕರಿಸಿದ್ದ, ಭಗತ್ ಸಿಂಗ್ ಬಿಡುಗಡೆಗೆ ಪ್ರಯತ್ನ ಮಾಡೆನು ಅಂದಿದ್ದವನಿಗೆ ದೇಶದ್ರೋಹಿ ಅನ್ನದೆ ಮತ್ತೇನನ್ನಬೇಕು?
ಒಂದು ಕಾಲದಲ್ಲಿ ಸಾವರ್ಕರ್ ಭಾಷಣ ಕೇಳಲು ಆಫ್ರಿಕಾದಿಂದ ಇಂಗ್ಲೆಂಡ್ಗೆ ಓಡೋಡಿಹೋಗಿದ್ದ ವ್ಯಕ್ತಿ ಮುಂದೊಂದು ದಿನ ಸಾವರ್ಕರ್ ಯಾರು ಎಂದುಕೇಳುತ್ತಾನೆಂದರೆ ಆತ ವಿಶ್ವಾಸಘಾತುಕನಲ್ಲವೆ?
ಮಿತ್ರರೆ ಕರಿನೀರ ಶಿಕ್ಷೆಯೆಲ್ಲಿ ಜೈಲ್ ಶಿಕ್ಷೆಯೆಲ್ಲಿ?ಜೈಲ್ನಲ್ಲಿ ಮಂಚದ ಮೇಲೆ ಮಲಗುವುದಕ್ಕೂ ಗಾಣಕ್ಕೆ ಕಟ್ಟಿ,ಹುಳುಹುಪ್ಪಟೆಗಳಿಂದ ಕೂಡಿದ ಆಹಾರ ತಿನ್ನುತ್ತ ನರಕಯಾತನೆ ರಾಷ್ಟ್ರ ಭಕ್ತಿ ಪಸರಿಸುತ್ತ ಅನುಭವಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿಲ್ಲವೆ?
-ಮತ್ತಷ್ಟು ಮಾಹಿತಿಯೊಂದಿಗೆ

ಅಗ್ನಿಕಿಡಿ….

ತಿನ್ನವೆಲ್ಲಿ!
ಸ್ವಾತಂತ್ರ್ಯಧೀರ ವೀರಪಾಂಡ್ಯಕಟ್ಟಬೊಮ್ಮನನ ಸ್ವರಾಜ್ಯ:
೧೮೭೨ ಸೆಪ್ಟೆಂಬರ್ ೫ರಂದು ವೀರ ಚಿದಂಬರನ ಜನನ.
ಮುಂದೆ ವಕೀಲ ಚಿದಂಬರಂ ಪಿಳ್ಳೆ. ನ್ಯಾಯಪರತೆ, ಬ್ರಿಟಿಷರ ದ್ವೇಷ!
ರಾಷ್ಟ್ರೀಯ ಕಾಂಗ್ರೆಸ್ನ ಮದರಾಸು ಪ್ರಾಂತೀಯ ಕಾರ್ಯದರ್ಶಿ!ವೀರ ಸನ್ಯಾಸಿ ವಿವೇಕಾನಂದರ ಪ್ರಭಾವ. ರಾಮಕೃಷ್ಣಾನಂದರ ಆಶಿರ್ವಾದ.ತಿಲಕ್,ಸಾವರ್ಕರ್,ಅರವಿಂದ, ಮೂಂಜೆ ಸಂಪರ್ಕ.ಸುಬ್ರಹ್ಮಣ್ಯ ಭಾರತಿ, ಸುಬ್ರಹ್ಮಣ್ಯ ಶಿವಂ ಜೊತೆಗೂಡಿ ಸ್ವದೇಶಿ ಆಂದೋಲನ.
ಬ್ರಿಟಿಷರಿಗೆ ಸಡ್ಡು ಹೊಡೆದು “ಸ್ವದೇಶಿ ಸ್ಟೀಮ್ ನೇವಿಗೇಷನ್ ಕಂಪೆನಿ” ಸ್ಥಾಪನೆ!
ತೂತ್ತಕುಡಿಯಲ್ಲಿ ಬ್ರಿಟಿಷರ ಕಂಪೆದನಿಗೆ ನಷ್ಟ.
ಟ್ಯುಟಿಕಾರಿನ್ ಕಾರ್ಮಿಕ ಹೋರಾಟದ ನಾಯಕತ್ವ.
ಸೆರೆಮನೆವಾಸ. ತಿನ್ನವೆಲ್ಲಿಯ ಪ್ರಳಯಾಗ್ನಿ ಸ್ಫೋಟ!
ಸ್ವದೇಶಿ ಕಂಪೆನಿಯ ನಿರ್ದೇಶಕರಿಗೆ ಲಂಚದಾಸೆ ತೋರಿಸಿ ಬ್ರಿಟಿಷ್ ವಶಮಾಡಿಸಿದ ಕಲೆಕ್ಟರ್ ಆಷ್!
ಜೀವಾವಧಿ ಕಾರಾಗೃಹ ಶಿಕ್ಷೆ. ಗಾಣ ಎಳೆಯುವ ಶಿಕ್ಷೆ!
ಜೈಲಿನಲ್ಲೇ ತಿರುಕ್ಕುರಳ್ ನ ಸರಳೀಕರಣ.ತೋಲ್ಕಾಪ್ಪಿಯ ಅರ್ಥವಿವರಣೆ।
ರುಧಿರಾಭಿಷೇಕ!

ಹೌದು ಅದ ಕಂಡರೆ ಕರುಳು ಕಿವುಚುವ ವೇದನೆ…!

ಹೌದು ಅದ ಕಂಡರೆ ಕರುಳು ಕಿವುಚುವ ವೇದನೆ…!
ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್॥
ಸ್ತ್ರೀಯರಿಗೆ ಗೌರವ ಕೊಡುವ, ಪೂಜ್ಯ ಭಾವದಿಂದ ನೋಡುವ ಈ ದೇಶದಲ್ಲಿ ಆ ಸಾಧ್ವಿಶಿರೋಮಣಿಯನ್ನು ಅದೆಷ್ಟು ಹೀನಾಯವಾಗಿ ನಡೆಸಿಕೊಂಡರು!
ಹೌದು, ಒಂದಲ್ಲ ಬರೋಬ್ಬರಿ ಮೂರು ಬಾರಿ ಬ್ರೈನ್ ಮ್ಯಾಪಿಂಗ್!
ತಲೆಕೆಳಕಾಗಿ ನೇತಾಡಿಸಿ ಚಿತ್ರಹಿಂಸೆ!
ಕಾರಣ ಹಿಂದೂ ಭಯೋತ್ಪಾದನೆ ಎಂಬ ಪೊಳ್ಳು, ಸುಳ್ಳು ನೆವ, ಕಟ್ಟುಕಥೆ॥ಆ ಧೂರ್ತ ಎಟಿಸ್ ಅಧಿಕಾರಿ ಹೇಮಂತ ಕರ್ಕರೆಗೆ ಮುಂದೆಹೋರಾಡದೆ ಪರಮವೀರ ಚಕ್ರ!
ನಾಲ್ಕು ವರುಷಗಳ ಹಿಂದೆ ಮಾರಿದ ಬೈಕ್ ಮಾರಿದವನದಾಗುತ್ತದೆಯೇ ಅಥವಾ ಅದರ ಸಮೀಪ ಬಾಂಬ್ ಸ್ಫೋಟವಾದರೆ ಆ ವ್ಯಕ್ತಿ ಅಥವಾ ಬೈಕ್ ಯಜಮಾನ ಕಾರಣನೇ?
RDX ಹೊಂದಿಲ್ಲದಿದ್ದರೂ ವೃಥಾ ಆರೋಪಿಸಿ ಹದಿನೇಳು ಬಾರಿ ಶೌರ್ಯ ಪ್ರಶಸ್ತಿ ವಿಜೇತ ಕರ್ನಲ್ ನನ್ನು (ಲೆ॥ ಕ॥ ಪುರೋಹಿತ್ ) ಕೈ ಬೆರಳು ತುಂಡರಿಸಿ ಯಮ ಯಾತನೆ ನೀಡಿದ್ದು ಎಷ್ಟರ ಮಟ್ಟಿಗೆ ಸಮಂಜಸ?
ಕೇವಲ ಪರಿಚಿತರಾದ ಮಾತ್ರಕ್ಕೆ ಅವರೆಲ್ಲಾ ಸಹಭಾಗಿಗಳೇ?
ಅಷ್ಟಕ್ಕೂ ಇಷ್ಟರವರೆಗೂ ಸಾಧಿತವಾಗದ ಆರೋಪವನ್ನೇ ಅಪರಾಧ ಎಂದು ಈ ಸೂಡೋ ಸೆಕ್ಯುಲರಿಷ್ಟರು ಯಾಕೆ ಬೊಬ್ಬಿರಿಯುತ್ತಿದ್ದಾರೆ?
ಒಂದು ವೇಳೆ ಅವರೇ ಆದರೂ ಅದು ನಿದ್ರಿತ ಜನರನ್ನು, ಕಿವುಡು ಸರಕಾರವನ್ನು, ಮತಾಂಧ ಉಗ್ರರನ್ನು ಎಚ್ಚರಿಸಲೇ ಹೊರತು ಯಾರನ್ನೂ ಕೊಲ್ಲಲಿಕ್ಕಾಗಿ ಅಲ್ಲ, ಅಷ್ಟಕ್ಕೂ ಅಲ್ಲಾರೂ ಸತ್ತಿಲ್ಲ!
ದೇಶಪ್ರೇಮಿಗಳಿಗೆ ಚಿತ್ರಹಿಂಸೆ ಕೊಟ್ಟು ಉಗ್ರರಿಗೆ ಬಿರಿಯಾನಿ ತಿನ್ನಿಸುವ ಈ ಸರಕಾರವನ್ನು ಉಳಿಯಗೊಡಬೇಕೆ?
ವಂದೇ ಮಾತರಂ॥

ಧೀಂತನ…

ಭಾವನೆಗಳ ತಾಕಲಾಟದಿ ನಲಿವ ಮನಸು
ಆಶಾವಾದದ ತಲ್ಪದಲಿ ಸುರಿವ ಕನಸು|
ಅವಿರತ ಸಾಧನಾ ಶಿಖರವನ್ನೇರುವ ಆಸೆ
ಪರಿಶ್ರಮದ ಬವಣೆಗೆ ತಾತ್ಸಾರದ ಮೂಸೆ||

ಧುತ್ತನೆರಗಿದ್ದು ಘಾತ, ಆಘಾತ
ಶ್ರಮಕ್ಕೆ ಸಶ್ರಮ ಶಿಕ್ಷೆ, ಮನೋವಿಕಲ್ಪ|
ಆಸೆಗಳ ಲೋಕದಲಿ ನಿರಾಸೆಯ ಕಾರ್ಮೋಡ
ಧಿಕ್ಕಾರ ಆ ನಿರ್ಭಾವುಕ ಲೋಭದ ಸ್ನೇಹಕೆ||

ಘೋರತಮದಲಿ ಅದೊಂದು ಮಿಂಚು
ವಿಷವಾಗುತಿಹ ಮನಸಿಗೆ ಅಮೃತದ ಸಿಂಚನ|
ಮುಳುಗದಿರು ಮಾನವ ಅದು ಘೋರ ಸಂಚು
ಚಿತ್ತವನು ಏಕದಲಿಟ್ಟು ನಡೆಸು ಚಿಂತನ, ಮಂಥನ||

ಸಮಾಗಮ…..

ದಗ್ಧ ದಿಗಂತದ ಶುದ್ಧ ಕೋಪಕೆ
ಮುಗ್ಧ ಭೂಮಿಗದು ಅಭಿಷೇಕ।
ವರುಣನಾರ್ಭಟಕೆ ಶಬ್ಧ ಸಾರಥ್ಯ
ಮೇಘ ಮಿಂಚೊಳ್ ಮರೆಯಾಗಿಹ ರವಿಯಾಟ॥

ಋತುರಾಜ ವಸಂತನ ಶೃಂಗಾರದಾಟವು
ಕೊಚ್ಚಿಹೋಯಿತು ಮುಂಗಾರಿನ ರಭಸದೊಳ್।
ನೊರೆಯುಕ್ಕಿಸೋ ನದಿ ತೊರೆಗಳ ಒನಪು ವೈಯ್ಯಾರ
ಇರುಳು ಕವಿಯುತಿರೆ ಕುಂಭದ್ರೋಣ ಝೇಂಕಾರ॥

ಮರುತನಾರ್ಭಟಕೆ ಸಿಡಿಲ ಠೇಂಕಾರ
ಕೋಲ್ಮಂಚಿಗೆ ಖಗ ಮೃಗಗಳ ಚೀತ್ಕಾರ।
ಅತಿಭೀಕರ ಅರಿಭಯಂಕರ ಭೂವರುಣ ಸಮಾಗಮ
ಪ್ರಕೃತಿಯ ಈ ಪ್ರಕ್ರಿಯೆ ನಿರಂತರ॥

ಸುಪ್ತ ಸ್ವರ

ನವಿಲ ನಾಟ್ಯ ಮನಕೆ ಮುದವು ಗೆಳತಿ ಸುಂದರ
ದುಗುಡ ಮರೆತು ಸೇರು ಎನ್ನ ಹೃದಯ ಮಂದಿರ
ಗರಿಯ ಬಿಚ್ಚಿ ನಲಿವ ರೀತಿ ರಮ್ಯ ಮನೋಹರ
ಧರಣಿ ಸೊಬಗ ನೋಡಿ ನಗುವ ಗೆಳೆಯ ಚಂದಿರ॥

ಮೇಘ ಶ್ಯಾಮ ಮುಸಲಧಾರೆ ಇಳೆಗೆ ಸಿಂಚನ
ಜಲವು ದೊರೆತು ಬೀಜ ಮೊಳೆತು ಬೆಳೆಯು ಕಾಂಚನ
ನಿಮಿರಿ ನಿಂತ ರೋಮ ಕೇಳಿ ವ್ಯಾಘ್ರ ಘರ್ಜನೆ
ಅದುರಿ ಅಧರ ಪಠಿಸುತಿಹುದು ರಾಮ ನಾಮ ಅರ್ಚನೆ॥

ಶುಭ್ರ ಜಲದಿ ನಿನ್ನ ಬಿಂಬ ಎನ್ನ ಮನದೊಳ್ ಮೂಡಿದೆ
ವರ್ಷಧಾರೆಗೆ ವದನವೊಡ್ಡಲು ನಿನ್ನ ಸನಿಹ ಬೇಡಿದೆ
ಬಾಲೆ ನಿನ್ನ ನಲಿವ ಕಂಡು ಸುಪ್ತಸ್ವರವು ಹೊರಟಿದೆ
ಹಸಿರ ಸಿರಿಯೊಳು ಆತ್ಮ ವಿಹರಿಸೆ ಮನದ ಬೇಸರ ನೀಗಿದೆ॥

ಆ ಮುಗುದೆ…! ಐದು ವರುಷಗಳ ಹಿಂದಿನ ಆ ಮೆಲುಕು!

ಅರಳುತಿಹ ಕೆಂದಾವರೆಯ ಎಳೆಯ
ದಳಗಳ ಮುತ್ತಿಕ್ಕಿದ ಶುಭ್ರ ಸ್ಪಟಿಕ
ಬಿರಿದ ಗುಲಾಬಿಯ ಮೇಲಿನ ಮುತ್ತಿನ ಹನಿ
ಮಲ್ಲಿಗೆಯ ಕಂಪು ಸಿರಿ ಸಂಪಿಗೆಯಂತೆ
ಆ ಮುಗುದೆ॥
ಹಿತವೆನಿಪ ಉದಯ ಸೂರ್ಯರಶ್ಮಿ
ಕೇಶವನಾಡಿಸುವ ಶೀತಲ ಮಂದಾನಿಲ
ಹಸಿರ ಮುಚ್ಚಿಸಿಹ ಮುಂಜಾವಿನ ರಜತ ಮಂಜು
ಏಕ ನಿನಾದದೊಳು ತಾ ಮೆರೆವ ನಿರ್ಮಲ ಜಲಧಿ
ಆ ಮುಗುದೆ॥
ನಾಚಿದ ಮೊಗವದು ಮುಸ್ಸಂಜೆಯ ರವಿ
ಗೂಡು ಸೇರುತಿಹ ಬಾನಾಡಿಗಳ ನಡುವೆ ಬೆದರಿದ ಹರಿಣಿ
ಚಕ್ರಗಳ ಸ್ವಾಧೀನಪಡೆದ ಸುಷುಮ್ನಾವಸ್ಥೆಯ ಯೋಗಿ
ನಿಶೆಯ ನಶೆಗೆ ಜಾರುತಿಹ ಬೆಳದಿಂಗಳ ಬಾಲೆ
ಆ ಮುಗುದೆ॥

ಆತ…..

ಆತ,

ದಾಸ್ಯದ ಪೂಜೆಯ ನಿಲ್ಲಿಸಲು ಕಾಳಿಯ ಗರ್ಭಗುಡಿ ಸೇರಿದ।
ಮಿತ್ರರ ಸೇರಿಸಿದ, ಸ್ವರಾಜ್ಯದುಸಿರಿನ ಮೇಳವಾಯಿತು॥

ಭಗೂರಲ್ಲಿ ಪ್ಲೇಗ್ ಮಾರಿಗೆ ಯಮನಾದ।
ವಿದೇಶಿ ವಸ್ತುಗಳ ಉರಿಸಿದ, ಸ್ವದೇಶಿ ಚಿಂತನೆ ಹರಿಸಿದ॥
ಪರಕೀಯ ಮನೋಭಾವ ಅಳಿಸಲು ಅಭಿನವ ಭಾರತ ಕಟ್ಟಿದ।
ಭವಾನಿಯ ಉಳಿಸಲು ಭಾರತಭವನವ ಸೇರಿದ॥

ದೇಶಭಕ್ತರ ಗುರುವಾದ, ಕ್ರಾಂತಿಗೆ ಸೋಪಾನವಾದ।
ದಂಗೆಯಲ್ಲ, ಸ್ವಾತಂತ್ರ್ಯ ಸಂಗ್ರಾಮವೆಂದ॥
ಅರಳಿತು ಮ್ಯಾಝಿನಿಯ ಚರಿತೆ।
ಜನ ಹರಿಸಿತು ಪ್ರೀತಿಯ ಒರತೆ॥

ಮಾತೆಯ ಮಾನ ಕಾಪಾಡಲು ಸಾಗರ ಈಜಿದ।
ಕತ್ತಲ ಕೋಣೆಯ ಕಲ್ಲಿನ ಗೋಡೆಗಳ ಮೇಲೆ ಹತ್ತುಸಾವಿರ ಸಾಲಿನ ಕವನ ಮೂಡಿತು॥

ಭಾಷಾಶುದ್ಧಿ, ವಾಗ್ಗೇಯಕಾರ ಇತಿಹಾಸಕ್ಕೆ ಅಲಂಕಾರ।
ಕವಿಪುಂಗವ, ವ್ಯಾಕರಣ ಶುದ್ಧಿ ನಾಟಕಕಾರ ಇತಿಹಾಸಕಾರ॥

‘ಶುದ್ಧಿ’ ಹಿಂದುತ್ವ, ಸಾಮಾಜಿಕ ಪರಿವರ್ತಕ।
“ಮೋಪಳಾಕಾಂಡ, ನನ್ನ ಜೀವಾವಧಿಯ ಶಿಕ್ಷೆ,ಕಮಲಾ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, …..”
ಹಿಂದೂಮಹಾಸಭಾ, ಪತಿತಪಾವನ ಮೃತ್ಯುಂಜಯ…..
ಜಯಜಯ ಜಯಜಯ ಜಯಜಯ…

ಅಹುದು ನೀ ಎನ್ನ ಹೃದಯ ಸಾಮ್ರಾಟ…..!!!

ನಾಳೆ ೨೬ ವೀರಸಾವರ್ಕರ್ ಸ್ಮೃತಿ ದಿವಸ. ಆ ಪ್ರಯುಕ್ತ ಈ ಅಂತರಂಗದ ನಿನಾದ॥
ಏಡನ್।
ಅಲ್ಲಿ ಫಡಕೆಯ ಕಿಡಿ ಆರಿತು!
ಭಗೂರು।
ಇಲ್ಲಿ ಸ್ವಾತಂತ್ರ್ಯದ ಅಗ್ನಿದಿವ್ಯ ಮೊರೆಯಿತು!!
ಭವತಾರಿಣಿಯೆದುರು ಭವಿತವ್ಯದ ಧ್ಯಾನ
ಅಭಿನವಭಾರತದಾಖ್ಯಾನ।
ಮಿತ್ರಮೇಳದ ಉದ್ಯಾಪನ
ಕ್ರಾಂತಿಗೀತೆಗೆ ನವ ವ್ಯಾಖ್ಯಾನ॥
ವಿದ್ಯಾಲಯ ತ್ಯಜಿಸಿತು ದೇಶಭಕ್ತಿಯಪರಾಧ
ಸ್ವದೇಶಿಯತೆ ಸ್ಪುರಿಸಿತು ಚಳವಳಿಯ ಹರಿಕಾರ।
ವಿದೇಶಿಯತೆ ಸ್ವರಾಷ್ಟ್ರ ಯಜ್ಞಕ್ಕಾಹುತಿ
ಮಾತೆಗಾಗಿ ಮಾತ್ರವೇ ಆತ್ಮಾಹುತಿ॥
ಸಿಂಹದ ಗುಹೆಗೆ ನರಸಿಂಹನಾಗಮನ
ಪ್ರಥಮ, ದಂಗೆಯದಲ್ಲ ಸ್ವಾತಂತ್ರ್ಯಸಂಗ್ರಾಮ।
ಅರಳಿತು ಮ್ಯಾಜಿನಿಯ ಜೀವನ ಚರಿತ್ರೆ
ಸುಪ್ರೇರಣೆ ಹೃದಯಸಾಮ್ರಾಟ ಶಿವಬಾ ಸುಚರಿತ್ರೆ॥
ಅಗ್ನಿಕಣವೆದ್ದಿತು ಮದನ
ಮರ್ಧನವಾದನು ದುಷ್ಟ ಕರ್ಜನ॥
ಮಾತೃಭೂಮಿಗೆ ರುಧಿರಮಜ್ಜನ
ರೋಮಾಂಚಸದೃಶ ಸರ್ವಜನ॥
ಘಾತವಾಗೆರಗಿತು ಯಾನ
ಬಂಧನ ಜಯಿಸೆ ಸಾಗರ ಈಸಿದ ಸಾಹಸಿ।
ಎರಗಿತು ಕರಿನೀರ ಯಾತನಾ
ಜನ ಕಣ್ಣೀರ್ಗರೆಯುತ ಕಳಿಸಿತು ಹರಸಿ॥
ಗುದ್ದುಗಳಿಗೆ ಶಿಲೆಯಾಗಿ ಗಾಣಕ್ಕೊರಳೊಡ್ಡಿ
ಶುದ್ಧೀಚಳವಳಿ ಸಾಧನೆಗಿಲ್ಲ ಅಡ್ಡಿ।
ಶಿಲೆಯಲ್ಲರಳಿತು ದಶಸಹಸ್ರ ಸಾಲಿನ ಕಮಲಾ
ಮಾತೆ ಭಾರತಿಯ ಪೂಜೆಗೊಪ್ಪಿಸಿದ ಪುಷ್ಪಕಮಲ॥
ಇತಿಹಾಸಕಾರ ಕಾದಂಬರಿಕತೃ ಕವಿಪುಂಗವ
ಲಿಪಿ ಪಂಚಾಂಗ ಧರ್ಮಸುಧಾರಕ ವಾಗ್ಭಟ।
ಭಾಷಾಶುದ್ಧಿ ಸಾಮಾಜಿಕ ಕ್ರಾಂತಿ
ಪ್ರೀತಿಯ ತಾತ್ಯಾ ಹಿಂದೂ ಹೃದಯಸಾಮ್ರಾಟ॥
ತಾತ್ಯಾ…..ತಾತ್ಯಾ…..ತಾತ್ಯಾ…..
ಆದರೆ,
ಮರೆತು ಯಾತನೆ
ಉಳಿದ ವೇದನೆ।
ದಿವ್ಯಚೇತನ
ಅಮರ ಚೇತನ॥

ಮನದ ಕಾತುರ…..!

 

 
ನಿನ್ನ ಕಣ್ಣೊಳ್ ಎನ್ನ ಬಿಂಬವ ಹುಡುಕುತಿಹೆನು
ನಿನ್ನ ಮನದೊಳ್ ಎನ್ನ ಭಾವವ ಅರಸುತಿಹೆನು॥
ನಿನ್ನ ನಗೆಯೊಳಡಕವಾಗಿಹುದೆನ್ನ ಮಂದಹಾಸವೋ
ನಿನ್ನ ಉಸಿರೊಳ್ ನನ್ನ ಉಸಿರು ಮಿಳಿತವಿರುವುದೋ॥

ನಿನ್ನ ವಾಣಿಯ ಕೇಳಿ ಶುಕವು ಮೌನವಾಂತಿಹುದೋ
ನಿನ್ನ ನಾಟ್ಯಕೆ ಮಯೂರ ತಾ ನಾಚಿ ನೀರಾಯ್ತೋ॥
ಕೋಗಿಲೆ ಹಾಡಿತು ನಿನ್ನ ಗಾನದ ಸಿರಿಗೆ ಬೆರಗಾಗಿ
ನಿನ್ನ ಬಳುಕಿಗೆ ಜಲಧಿ ತಾ ಲಾಸ್ಯವಾಡಿತೋ॥

ಹಸಿರ ಸಿರಿಯು ನವೀನ ಶಕೆಯು ಎನ್ನ ಬಾಳ ಪುಟದಲಿ
ಧರ್ಮ ಸಂಸ್ಕೃತಿ ಮೆರೆದು ಮರೆತಿಹ ಪುಣ್ಯ ಭರತ ನೆಲದಲಿ॥
ಸಿಂಧು ಬಿಂದುವು ಸೋಕಲೆನ್ನುವ ಎನ್ನ ದೇಹದ ಕಾತರ
ವಂದೇ ಮಾತರಂ ಎನ್ನಲೋಸುಗ ಎನ್ನ ಹೃದಯದ ಆತುರ॥